ಪುಣೆ :ನಾವು ತುಳುವರು ಎಲ್ಲೆ ಇರಲಿ ಎಲ್ಲೇ ಹೋಗಲಿ ನಮ್ಮ ಬಾಷೆ ,ಕಲೆ , ಸಂಸ್ಕ್ರತಿಯನ್ನು ಬಿಟ್ಟವರಲ್ಲ ,ತುಳು ಭಾಷೆ ,ಕಲೆ ಸಂಸ್ಕ್ರತಿಯನ್ನು ಪುಣೆಯಲ್ಲಿ ಬೆಳೆಸಿ ,ಪ್ರಚಾರ ಪಡಿಸಿದ ಕೀರ್ತಿ ತುಳುಕೂಟಕ್ಕೆ ಸಲ್ಲುತ್ತದೆ , ತುಳುಕೂಟ ಸ್ಥಾಪನೆ ಮಾಡಿ 25 ವರ್ಷಗಳ ಕಾಲ ನಿರಂತರ ತುಳುವಿಗಾಗಿ ಸೇವೆಮಾಡಿದ ಮಹನಿಯರನ್ನು ನಾವಿಲ್ಲಿ ಸ್ಮರಿಸಬೇಕು . ಇಂದು ತುಂಬಾ ಮಕ್ಕಳು ಈ ಸ್ಪರ್ಧಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ .ತುಳು ಬಾಷೆ ಕಲೆ ಸಂಸ್ಕ್ರತಿಯನ್ನು ಇಂದಿನಮಕ್ಕಳಿಗೆ ತಿಳಿಸುವ ಬಹಳ ದೊಡ್ಡ ಕಾರ್ಯ ಆಗಬೇಕಿದೆ . ತುಳು ಸಂಸ್ಕಾರ ,ಸಂಸ್ಕ್ರತಿ ಮೈಗೂಡಿಕೊಂಡ ತುಳುವರ ಸಾಧನೆ ಇತರೆ ಎಲ್ಲರಿಗೂ ಮಾದರಿಯಾಗಬಲ್ಲುದು ಎಂದು ಪುಣೆ ಕನ್ನಡ ಸಂಘದ ಉಪಾಧ್ಯಕ್ಷೆ ಇಂದಿರಾ ಸಾಲ್ಯಾನ್ ನುಡಿದರು .
ತುಳುಕೂಟ ಪುಣೆ ರಜತ ಮಹೋತ್ಸವ ಪ್ರಯುಕ್ತ ವಿವಿದ ಸ್ಪರ್ಧಾ ಕಾರ್ಯಕ್ರಮಗಳು ಹಾಗೂ ಪ್ರತಿಭಾ ಸ್ಪರ್ಧಾ ಕಾರ್ಯಕ್ರಮಗಳು ವಿವಿದ ವಯೋಮಿತಿಗೆ ಅನುಗುಣವಾಗಿ ಸೆ 15 ರವಿವಾರದಂದು , ಶ್ಯಾಮ್ ರಾವ್ ಕಲ್ಮಾಡಿ ಕನ್ನಡ ಹೈಸ್ಕೂಲ್ ಕೆತ್ಕರ್ ರೋಡ್ ಪುಣೆ ಇಲ್ಲಿ ಜರಗಿತು .
ಈ ಪ್ರತಿಭಾ ಸ್ಪರ್ದೆಗಳನ್ನು ಪುಣೆ ತುಳುಕೂಟದ ಅಧ್ಯಕ್ಷರಾದ ದಿನೇಶ್ ಶೆಟ್ಟಿ ಕಳತ್ತೂರು ,ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು , ,ರಜತ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರೋಹಿತ್ ಶೆಟ್ಟಿ ನಗ್ರಿ ಗುತ್ತು ತುಳುಕೂಟದ ಉಪಾಧ್ಯಕ್ಷರಾದ ಉದಯ ಶೆಟ್ಟಿ ಕಳತ್ತೂರು ,ಕಾರ್ಯದರ್ಶಿ ರಾಜಾರಾಮ್ ಶೆಟ್ಟಿ ಮಹಿಳಾ ಕಾರ್ಯಾಧ್ಯಕ್ಷೆ ಪ್ರಿಯಾ ಎಚ್ ದೇವಾಡಿಗ ,ಗೌರವಾಧ್ಯಕ್ಷೆ ಸುಜಾತ ಶೆಟ್ಟಿ ,ಉಪಾಧ್ಯಕ್ಷೆಯರುಗಳಾದ ಗೀತಾ ಪೂಜಾರಿ ಶಶಿಕಲಾ ಶೆಟ್ಟಿ ,ಕಾರ್ಯದರ್ಶಿ ನಯನ ಶೆಟ್ಟಿ ಯವರು ಮತ್ತು ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದು ದೀಪ ಬೆಳಗಿಸಿ ಉದ್ಘಾಟಿಸಿದರು.
ಮಕ್ಕಳಿಗಾಗಿ ತುಳು ಮತ್ತು ಕನ್ನಡ ಭಕ್ತಿಗೀತೆ ,ಚಿತ್ರಕಲಾ ಸ್ಪರ್ಧೆ.ಮಕ್ಕಳಿಗಾಗಿ ಮತ್ತು ಮಹಿಳೆಯರು ಪುರುಷರಿಗಾಗಿ ರಂಗೋಲಿ ಸ್ಪರ್ಧೆ ,ಮಕ್ಕಳಿಗಾಗಿ ಮುದ್ದುಕೃಷ್ಣ ಸ್ಪರ್ಧೆ ಮತ್ತು .ಬಾಲಕೃಷ್ಣ ಸ್ಪರ್ಧೆ .ಎಲ್ಲಾ ವಯೋಮಾನದವರಿಗಾಗಿ ತುಳು ಜಾನಪದ ಸ್ಪರ್ಧೆ ಛದ್ಮವೇಷ ,ತುಳು ಮತ್ತು ಕನ್ನಡ ಸೀನೆಮಾ ಹಾಡು ಸ್ಪರ್ಧೆ . ಭರತನಾಟ್ಯಸ್ಪರ್ಧೆ ತುಳು ಭಾಷಣ ಸ್ಪರ್ಧೆ . ಏಕಪಾತ್ರಾಭಿನಯ ಸ್ಪರ್ಧೆ ,ಮಹಿಳೆಯರಿಗಾಗಿ ತುಳುನಾಡಿನ ಸಂಸ್ಕೃತಿಯ ಸೀರೆ ಮತ್ತು ಒಡವೆಗಳನ್ನು ಧರಿಸಿ ಫ್ಯಾಷನ್ ಶೋ ಸ್ಪರ್ಧೆ ,ಮತ್ತು ಕವಿ ಗೋಷ್ಠಿ. ಸ್ಪರ್ಧೆಗಳು ನಡೆದವು .
ತೀರ್ಪುಗಾರರಾಗಿ ಮಹೇಶ್ ಹೆಗ್ಡೆ ಪೊಳಲಿ ,ರಮೇಶ್ ಕುಲಾಲ್ , ಸಂತೋಷ್ ಶೆಟ್ಟಿ ಪೆರ್ಡೂರ್ ,ಅಕ್ಷತಾ ಸುಜಿತ್ ಶೆಟ್ಟಿ ,ಸಮರ್ಥ್ ಶೆಟ್ಟಿ ,ಶಾರದ ಶೆಟ್ಟಿ ,ಪ್ರೇಮ ಅರ್ ಶೆಟ್ಟಿ ,ವಿನೋದಾ ಶೆಟ್ಟಿ ,ಅಂಬಿಕಾ ಶೆಟ್ಟಿ ,ಲತಿಕಾ ,ದಿಶಾ ದಿವಾಕರನ್ ,ಅದಿತಿ ಕಿಣಿಯವರು ಸಹಕರೀಸಿದರು ,ತೀರ್ಪುಗಾರರನ್ನು ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು .
ಈ ಪ್ರತಿಭಾ ಸ್ಪರ್ಧಾ ಕಾರ್ಯಕ್ರಮದ ನಂತರ ಎರಡು ವಿಭಾಗಗಳಲ್ಲಿ ಸಭಾ ಕಾರ್ಯಕ್ರಮವು ತುಳುಕೂಟದ ಅಧ್ಯಕ್ಷರಾದ ದಿನೇಶ್ ಶೆಟ್ಟಿ ಕಳತ್ತೂರು ,ರಜತ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ಪುತ್ತೂರು ರವರ ಅಧ್ಯಕ್ಷತೆಯಲ್ಲಿ ಜರಗಿತು , ಮುಖ್ಯ ಅತಿಥಿಗಳಾಗಿ ಪುಣೆ ಕನ್ನಡ ಸಂಘದ ಉಪಾಧ್ಯಕ್ಷೆ ಇಂದಿರಾ ಸಾಲ್ಯಾನ್ , ತುಳುಕೂಟದ ಮಾಜಿ ಮಹಿಳಾ ಕಾರ್ಯಾಧ್ಯಕ್ಷೆ ಪುಷ್ಪ ಎಲ್ .ಪೂಜಾರಿ,ಪುಣೆ ಬಂಟರ ಸಂಘದ ಉತ್ತರ ಪ್ರಾದೇಶಿಕ ಸಮಿತಿಯ ಮಹಿಳಾ ಕಾರ್ಯಾಧ್ಯಕ್ಷೆ ಪ್ರೇಮ ಅರ್ .ಶೆಟ್ಟಿ, ದಕ್ಷಿಣ ಪ್ರಾದೇಶಿಕ ಸಮಿತಿಯ ಮಹಿಳಾ ಕಾರ್ಯಾಧ್ಯಕ್ಷೆ ಯಶೋದಾ ಶೆಟ್ಟಿ , ಉಪಸ್ಥಿತರಿದ್ದರು .ವೇದಿಕೆಯಲ್ಲಿ ತುಳುಕೂಟದ ಉಪಾಧ್ಯಕ್ಷರಾದ ಉದಯ ಶೆಟ್ಟಿ ಕಳತ್ತೂರು , ಕಾರ್ಯದರ್ಶಿ ರಾಜಾರಾಮ್ ಶೆಟ್ಟಿ , ರಜತ ಮಹೋತ್ಸವ ಸಮಿತಿಯ ಉಪಾಧ್ಯಕ್ಷರುಗಳಾದ ಸದಾಶಿವ ಸಾಲ್ಯಾನ್ , ಸಂತೋಷ್ ಶೆಟ್ಟಿ ಮಟ್ಟಾರ್ ,ವಿಶ್ವನಾಥ್ ಟಿ ಪೂಜಾರಿ, ಕ್ರೀಡಾ ಕಾರ್ಯಾಧ್ಯಕ್ಷ ನಾರಾಯಣ ಹೆಗ್ಡೆ ,ಜೊತೆ ಕೋಶಾಧಿಕಾರಿ ಪ್ರಕಾಶ್ ಪೂಜಾರಿ ,ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಿಯಾ ಎಚ್ ದೇವಾಡಿಗ ,ಗೌರವಾಧ್ಯಕ್ಷೆ ಸುಜಾತಾ ಶೆಟ್ಟಿ ,ಉಪಾಧ್ಯಕ್ಷೆಯರುಗಳಾದ ಗೀತಾ ಪೂಜಾರಿ ,ಶಶಿಕಲಾ ಶೆಟ್ಟಿ , ಯುವ ವಿಭಾಗದ ಮಹಿಳಾ ಕಾರ್ಯಾಧ್ಯಕ್ಷೆ ಶ್ರುತಿ ಜೆ .ಶೆಟ್ಟಿ ಯವರು ಉಪಸ್ಥಿತರಿದ್ದರು . ರೋಹಿತ್ ಶೆಟ್ಟಿ ನಗ್ರಿಗುತ್ತು ಸ್ವಾಗತಿಸಿ ತುಳುಕೂಟದ ರಜತ ಮಹೋತ್ಸವದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು .ಅತಿಥಿ ಗಣ್ಯರನ್ನು ಪುಷ್ಪಗುಚ್ಚ ಸ್ಮರಣಿಕೆ ನೀಡಿ ಗೌರವಿಸಲಾಯಿತು .ವೇದಿಕೆಯಲ್ಲಿದ್ದ ನಾರಾಯಣ್ ಹೆಗ್ಡೆ ,ರಾಜಾರಾಮ ಶೆಟ್ಟಿಯವರು ರಜತ ಮಹೋತ್ಸದ ಮುಂದಿನ ಕಾರ್ಯಕ್ರಮದ ಬಗ್ಗೆ ಸಾಂದರ್ಭಿಕವಾಗಿ ಮಾತನಾಡಿದರು .
ಪ್ರತಿಯೊಂದು ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ಮತ್ತು ಸರ್ಟಿಫಿಕೇಟ್ ನ್ನು ಅತಿಥಿ ಗಣ್ಯರು ನೀಡಿ ಗೌರವಿಸಿದರು ,ಸ್ಪರ್ದೆಗಳಲ್ಲಿ ಬಾಗವಹಿಸಿದ ಎಲ್ಲರಿಗೂ ತುಳುಕೂಟದ ಸರ್ಟಿಫಿಕೇಟ್ ನೀಡಲಾಯಿತು .ತೀರ್ಪುಗಾರರಾಗಿ ಬಾಗವಹಿಸಿದ ರವರನ್ನು ಗೌರವಿಸಲಾಯಿತು . ತುಳುಕೂಟದ ಸಮಿತಿ ಪದಾಧಿಕಾರಿಗಳು ,ರಜತ ಮಹೋತ್ಸವ ಸಮಿತಿಯ ಪದಾಧಿಕಾರಿಗಳು ,ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು .
ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯ ತುಳು ಭಾಂದವರು ,ಮಕ್ಕಳು ,ಮಹಿಳೆಯರು ಆಗಮಿಸಿ ಪ್ರತಿಭಾ ಸ್ಪರ್ಧೆಗಳಲ್ಲಿ ಪಾಲ್ಗೊಂ ಡರು.
ರಜತ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರೋಹಿತ್ ಶೆಟ್ಟಿ ನಗ್ರಿ ಗುತ್ತು ಕಾರ್ಯಕ್ರಮ ನಿರೂಪಿಸಿದರು ,ಪ್ರಿಯಾ ದೇವಾಡಿಗ ಪ್ರತಿಭಾ ಸ್ಪರ್ಧೆ ಗಳ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು ಹಾಗೂ ವಂದಿಸಿದರು .

ಪುಣೆ ತುಳುಕೂಟದ ರಜತ ಮಹೋತ್ಸವ ಸಂಭ್ರಮ ಕಾರ್ಯಕ್ರಮಗಳು ನಡೆಯುತಿದೆ .ಇದರ ಜೊತೆಯಲ್ಲಿ ಸಂಘದ ಮಿನಿ ಹಾಲ್ ಕೂಡಾ ಆಗುತಿದೆ ,ಪುಣೆಯ ತುಳುವರಿಗೆ ,ಬಡ ಕುಟುಂಬಗಳಿಗೆ ಮುಂದೆ ಸಂಘದ ಮುಖಾಂತರ ಯಾವುದೇ ರೀತಿಯಲ್ಲಾದರೂ ಸಹಾಯ ಸಿಗಬೇಕು ಎಂಬುದು ನಮ್ಮ ಆಶಯ .ಕೇವಲ ತೋರ್ಪಡಿಕೆಯ ಸಂಭ್ರಮ ಆಗದೆ ಸಮಾಜ ಮುಖಿಯಾದ ಚಿಂತನೆಯೊಂದಿಗೆ ನಾವು ಮುನ್ನಡಿಯಿಡುತಿದ್ದೇವೆ. ರಜತ ಮಹೋತ್ಸವಕ್ಕೆ ಪೂರಕವಾಗಿ 25 ಕಾರ್ಯಕ್ರಮಗಳು ನಡೆಸುವ ಯೋಚನೆಯಂತೆ ಇಂದು ಪ್ರತಿಭಾ ಸ್ಪರ್ದೆಗಳು ನಡೆಯುತಿದೆ ,ಮುಂದೆ ಆಟೋಟ ಸ್ಪರ್ದೆಗಳು ನವರಾತ್ರಿ ಮತ್ತು ಹಲವಾರು ಕಾರ್ಯಕ್ರಮಗಳು ನಡೆಯಲಿಕ್ಕಿದೆ .ನಮ್ಮೊಂದಿಗೆ ಪುಣೆಯ ಸರ್ವ ತುಳು ಭಾಂದವರು ಸೇರಿಕೊಂಡು ತನುಮನ ಧನದ ಸಹಾಯ ನೀಡಿ ಸಹಕರಿಸಿ ತುಳುವರ ಸೇವೆಯಲ್ಲಿ ಭಾಗಿಗಳಾಗೋಣ
–ಶ್ರೀ ದಿನೇಶ್ ಶೆಟ್ಟಿ ಕಳತ್ತೂರು ಅಧ್ಯಕ್ಷರು- ತುಳುಕೂಟ ಪುಣೆ
ಸಂಭ್ರಮ ಎಂದರೆ ಅದು ಅರ್ಥಪೂರ್ಣವಾಗಿ ನಡೆಯಬೇಕು ,ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಬೇಕು . ತುಳುವರಿಗೆ ಸಂಘದ ಮೂಲಕ ಪ್ರಯೋಜನಕಾರಿಯಾಗುವ ಕಾರ್ಯಗಳು ಆಗಬೇಕು . ಪುಣೆಯಲ್ಲಿರುವ ಕಟ್ಟಕಡೆಯ ತುಳುವರು ಕೊಡಾ ಕಾರ್ಯಕ್ರಮಗಳಲ್ಲಿ ಬಾಗಿಗಳಾಗಿ , ರಜತ ಮಹೋತ್ಸವದ ಕಾರ್ಯಕ್ರಮಗಳ ಮೂಲಕ ತುಳುವರಿಗಾಗಿ ತಮ್ಮ ಪ್ರತಿಭೆಗಳನ್ನು ರಂಗದಲ್ಲಿ ತೋರಿಸುವ ಅವಕಾಶ ಮಾಡಿ ಕೊಟ್ಟಿದ್ದೇವೆ ,ಮುಂದೆಯೂ ನಡೆಯಲಿದೆ . ಸಮಸ್ತ ತುಳುವರ ಪ್ರತಿಷ್ಠೆಯ ಸಂಸ್ಥೆಯಾಗಿರುವ ತುಳುಕೂಟ ನಿಮ್ಮದೇ ಸಂಸ್ಥೆ ,ನಮ್ಮೊಂದಿಗೆ ಸೇರಿಕೊಂಡು ಸಮಾಜದಲ್ಲಿರುವ ತುಳುವರ ಕಷತ್ ಸುಖಗಲ್ಲಿ ಬಾಗಿಗಳಾಗೋಣ. ರಜತ ಮಹೋತ್ಸವದ ಸಂಭ್ರಮದಲ್ಲಿ ತುಳುವರ ಒಗ್ಗಟ್ಟು ಮೂಡಿ ಬರಲಿ .ಸರ್ವರ ಸಹಕಾರ ನಮ್ಮೊಂದಿಗೆ ಇರಲಿ
–ಶ್ರೀ ಪ್ರವೀಣ್ ಶೆಟ್ಟಿ ಪುತ್ತೂರು -ಅಧ್ಯಕ್ಷರು ರಜತ ಮಹೋತ್ಸವ ಸಮಿತಿ ತುಳುಕೂಟ ಪುಣೆ
ತುಳು ಪ್ರತಿಬೆಗಳ ಮುಖಾಂತರ ನಮ್ಮ ಊರಿನ ಸಂಸ್ಕ್ರತಿಯನ್ನು ನೋಡುವ ಅವಕಾಶವನ್ನು ತುಳುಕೂಟ ಮಾಡಿ ಕೊಟ್ಟಿದೆ .ಉತ್ತಮ ಕಾರ್ಯಕ್ರಮ ಇಲ್ಲಿ ಮೂಡಿ ಬಂದಿದೆ ,-ರಜತ ಮಹೋತ್ಸವ ಸಂಭ್ರಮ ಪುಣೆಯ ಎಲ್ಲಾ ತುಳುವರ ಹಬ್ಬವಾಗಿ ಆಚರಿಸೋಣ.- ಸಂಭ್ರಮಕ್ಕೆ ಶುಭ ಹಾರೈಸುತ್ತೇನೆ
–ಶ್ರೀಮತಿ ಪ್ರೇಮ ಅರ್ .ಶೆಟ್ಟಿ –ಕಾರ್ಯಾಧ್ಯಕ್ಷೆ ಮಹಿಳಾ ವಿಭಾಗ , ಉತ್ತರ ಪ್ರಾದೇಶಿಕ ಸಮಿತಿ ಬಂಟರ ಸಂಘ ಪುಣೆ .
ಪುಣೆ ತುಳುಕೂಟ ಆರಂಭದಿಂದ ಇಂದಿನ ವರೆಗೆ ಹಲಾವರು ಅಧ್ಯಕ್ಷರು ನಾಯಕತ್ವದಲ್ಲಿ ಬೆಳೆದು ಬಂದಿದೆ ,ಇಂದು ರಜತ ಸಂಭ್ರಮ ದಲ್ಲಿರುವ ತುಳುಕೂಟಕ್ಕೆ ,ದಿನೇಶ್ ಶೆಟ್ಟಿ ,ಪ್ರವೀಣ್ ಶೆಟ್ಟಿ ,ರೋಹಿತ್ ಶೆಟ್ಟಿ ಮತ್ತು ಸಮಿತಿಯ ಎಲ್ಲರೂ ಸೇರಿಕೊಂಡು ಮಾದರಿಯಾಗಿ ಕಾರ್ಯಕ್ರಮ ಆಯೋಜಿಸುವ ಸಂಕಲ್ಪ ಮಾಡಿದ್ದಾರೆ, ತುಳುವರಿಗೆ ಇಂದು ತಮ್ಮ ಪ್ರತಿಭೆಗಳನ್ನು ಪ್ರಸ್ತುತ ಪಡಿಸುವ ಸುವರ್ಣಾವಕಾಶ ಮಾಡಿ ಕೊಟ್ಟಿದೆ ,ಇನ್ನು ಹೆಚ್ಚಿನ ಸಂಖ್ಯೆಯ ತುಳುವರು ಸೇರಿಕೊಳ್ಳಿ ,ನಮ್ಮ ತುಳು ಭಾಷೆ ಕಲೆ ಸಂಸ್ಕ್ರತಿ ಕಲಿಯುವ ಮತ್ತು ತಿಳಿದುಕೊಳ್ಳುವ ವೇದಿಕೆ ಇದು ,ಮನೆಯಲ್ಲಿ ಮಕ್ಕಳಿಗೆ ತುಳುವಿನಲ್ಲೇ ಮಾತನಾಡಿ ,ನಮ್ಮ ಸಂಸ್ಕ್ರತಿಯನ್ನು ತಿಳಿಸಿಕೊಡುವ ಕರ್ತವ್ಯ ನಮ್ಮದಾಗಿದೆ , ರಜತ ಸಂಭ್ರಮ ಮಾಡಿಯಾಗಿ ನಡೆಯಲಿ
– ಶ್ರೀಮತಿ ಪುಷ್ಪ ಪೂಜಾರಿ .ಮಾಜಿ ಕಾರ್ಯಾಧ್ಯಕ್ಷೆ ತುಳುಕೂಟ ಪುಣೆ
ಪುಣೆಯ ತುಳುವರಿಗೆ ಬೇಕಾದ ಅರ್ಥವತ್ತಾದ ಪ್ರತಿಬಾ ಸ್ಪರ್ಧೆ ನಡೆದಿದೆ ,ನಮ್ಮ ತುಳು ಮಕ್ಕಳಿಗೆ ತುಳು ಸಂಸ್ಕ್ರತಿಯ ಪ್ರಯೋಗದೊಂದಿಗೆ ಪಾಲು ಪಡೆಯುವ ಮತ್ತು ಕಲಿಯುವ ಅವಕಾಶವನ್ನು ತುಳು ಕೂಟ ಮಾಡಿ ಕೊಟ್ಟಿದೆ –ರಜತ ಸಂಭ್ರಮಕ್ಕೆ ನಮ್ಮೆಲ್ಲರ ಸಹಕಾರ ಸದಾ ಇದೆ
–ಯಶೋದ ಶೆಟ್ಟಿ -ಕಾರ್ಯಾಧ್ಯಕ್ಷೆ ಮಹಿಳಾ ವಿಭಾಗ ದಕ್ಷಿಣ ಪ್ರಾದೇಶಿಕ ಸಮಿತಿ ಬಂಟರ ಸಂಘ ಪುಣೆ
ವರದಿ :ಹರೀಶ್ ಮೂಡಬಿದ್ರಿ ಪುಣೆ