ಪುಣೆ : ಪುಣೆ ಬಂಟರ ಸಂಘದ ಸುವರ್ಣ ಮಹೋತ್ಸವದ ಅಂಗವಾಗಿ ಅಜೆಕಾರು ಕಲಾಭಿಮಾನಿ ಬಳಗ ಇವರ ಸಂಯೋಜನೆಯಲ್ಲಿ, ಸೆ 27 ರ ಶುಕ್ರವಾರದಂದು ಸಂಜೆ ಗಂಟೆ 5.00ರಿಂದ ಡಾ. ಕಲ್ಮಾಡಿ ಶ್ಯಾಮ್ ರಾವ್ ಕನ್ನಡ ಹೈಸ್ಕೂಲ್ ಕೇತ್ಕರ್ ರೋಡ್ ಎರಂದವನೇ ಪುಣೆ ಇಲ್ಲಿ
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮುಲ್ಕಿ
ಇವರಿಂದ ಬಪ್ಪನಾಡು ಕ್ಷೇತ್ರ ಮಹಾತ್ಮೆ ಎಂಬ ತುಳು ಪುಣ್ಯ ಕಥಾ ಭಾಗವನ್ನು ಯಕ್ಷಗಾನ ಬಯಲಾಟ ರೂಪದಲ್ಲಿ ಆಡಿ ತೋರಿಸಲಿದ್ದಾರೆ .
ಪ್ರಬುದ್ದ ಯಕ್ಷ ಕಲಾವಿದರ ಕೂಡುವಿಕೆಯಲ್ಲಿ ಪ್ರದರ್ಶನ ಗೊಳ್ಳಲಿರುವ ಯಕ್ಷಗಾನ ಪ್ರದರ್ಶನದಲ್ಲಿ ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಗಿರೀಶ್ ರೈ ಕಕ್ಕೆಪದವು, ಹಾಗೂ ಗಣೇಶ್ ಹೆಬ್ರಿ ,ಚೆಂಡೆಯಲ್ಲಿ ಶ್ರೀ ಪ್ರಶಾಂತ್ ಶೆಟ್ಟಿ ವಗೆನಾಡು ,ಮದ್ದಲೆ ರೋಹಿತ್ ಉಚ್ಚಿಲ ,ಚಕ್ರತಾಳ ದಿನೇಶ್ ನಿರ್ಕೇರೆ, ಹಾಸ್ಯದಲ್ಲಿ ದಿನೇಶ್ ಶೆಟ್ಟಿಗಾರ್ ಕೊಡಪದವು, ಸ್ತ್ರೀ ಪಾತ್ರದಲ್ಲಿ ಕಡಬ ಶ್ರೀನಿವಾಸ ರೈ,ಪರಮೇಶ್ವರ ಗಂಗನಾಡು ,ಮಹೇಶ್ ಸಾಲ್ಯಾನ್ ,ಕಾರ್ತಿಕ್ ಗಂಜಿಮಠ, ಮುಮ್ಮೆಳದಲ್ಲಿ ರಾಧಕೃಷ್ಣ ನಾವುಡ ಮಧೂರು ,ಜಯಪ್ರಕಾಶ್ ಶೆಟ್ಟಿ ಪೆರ್ಮುದೆ ,ಜಯಾನಂದ ಸಂಪಾಜೆ ,ತಿಲಕ್ ಹೆಗ್ಡೆ ಪುತ್ತೂರು ,ರಾಕೇಶ್ ರೈ ಅಡ್ಕ,ನಾಗಪ್ಪ ಪಡುಮಲೆ ,ಸುರೇಶ ಹೆಗ್ಡೆ ಬಂಗಾಡಿ ,ಪ್ರಕಾಶ್ ಪಂಜ ,ಪುಷ್ಪರಾಜ್ ಗರ್ಗಲ್ ಸೇರಿದಂತೆ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಪ್ರದರ್ಶನ ಗೊಳ್ಳಲಿದೆ .

ಬಂಟರ ಸಂಘದ ಸುವರ್ಣ ಮಹೋತ್ಸವದ ಅಂಗವಾಗಿ ಸರಣಿ ಕಾರ್ಯಕ್ರಮಗಳ ಸಾಲಿನಲ್ಲಿ ನಡೆಯುವ ಈ ಯಕ್ಷಗಾನ ಕಾರ್ಯಕ್ರಮಕ್ಕೆ ಯಕ್ಷ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿ ಗೊಳಿಸಬೇಕೆಂದು ಪುಣೆ ಬಂಟರ ಸಂಘದ ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಕುಶಲ್ ಹೆಗ್ಡೆ, ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ, ಕಾರ್ಯಾಧ್ಯಕ್ಷ ವಿಶ್ವನಾಥ್ ಶೆಟ್ಟಿ ,ಮಹಿಳಾ ವಿಭಾಗದ ಗೌರವಾಧ್ಯಕ್ಷೆ ಜಯಂತಿ ಶೆಟ್ಟಿ, ಕಾರ್ಯಾಧ್ಯಕ್ಷೆ ದೇವಿಕಾ ಶೆಟ್ಟಿ, ಸಂಘದ ಮಹಿಳಾ ಕಾರ್ಯಾಧ್ಯಕ್ಷೆ ಸುಲತಾ ಎಸ್ .ಶೆಟ್ಟಿ ,ಮತ್ತು ಪದಾಧಿಕಾರಿಗಳು ಹಾಗೂ ಮೇಳದ ಮುಂಬೈ ಸಂಚಾಲಕರಾದ ಅಜೆಕಾರು ಕಲಾಭಿಮಾನಿ ಬಳಗದ ಸ್ಥಾಪಕರಾದ ಅಜೆಕಾರು ಬಾಲಕೃಷ್ಣ ಶೆಟ್ಟಿಯವರು ವಿನಂತಿಸಿಕೊಂಡಿರುತ್ತಾರೆ.