








ಪುಣೆ; ಪುಣೆ ತುಳುಕೂಟದ ರಜತ ಮಹೋತ್ಸದ ಅಂಗವಾಗಿ ವಾರ್ಷಿಕ ದಸರಾ ಪೂಜೆ ತೆನೆ ಹಬ್ಬ ಹಾಗೂ ದಾಂಡಿಯಾ ರಾಸ್ ಧಾರ್ಮಿಕ ಕಾರ್ಯಕ್ರಮವು ಅಕ್ಟೋಬರ್ 7 ಸೋಮವಾರದಂದು ಗಂಟೆ 5.00 ರಿಂದ ,ಪುಣೆಯ ವಾರ್ಜೆಯ ಶಿವರ್ಶ ಹೋಟೆಲ್ ನ ಬ್ಯಾಂಕ್ವೆಟ್ ಹಾಲ್ ನಲ್ಲಿ ವಿವಿದ ಧಾರ್ಮಿಕ ಪೂಜಾ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು .
ಪುಣೆ ತುಳುಕೂಟದ ಅಧ್ಯಕ್ಷರಾದ ದಿನೇಶ್ ಶೆಟ್ಟಿ ಕಳತ್ತೂರು ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು, ಕಾರ್ಯದರ್ಶಿ ರೋಹಿತ್ ಶೆಟ್ಟಿ , ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಿಯಾ ಎಚ್ .ದೇವಾಡಿಗ, ಮತ್ತು ತುಳುಕೂಟದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಜರಗಲಿರುವ, ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನವರಾತ್ರಿಯ ನವ ಮಾತೆಯರಾದ ಪುಣೆ ಬಂಟರ ಸಂಘದ ಮಹಿಳಾ ಕಾರ್ಯಧ್ಯಕ್ಷೆ ಸುಲತಾ ಎಸ್ ಶೆಟ್ಟಿ , ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರ ಪುಣೆ. ಇದರ ಅಧ್ಯಕ್ಷೆ ಜಯಲಕ್ಷ್ಮಿ ಪಿ ಶೆಟ್ಟಿ, ಪುಣೆ ಬಂಟ್ಸ್ ಅಸೋಸಿಯೇಷನ್ ನ ಮಹಿಳಾ ಕಾರ್ಯಾಧ್ಯಕ್ಷೆ ರೇಷ್ಮಾ ಅರ್ ಶೆಟ್ಟಿ , ಪುಣೆಯ ಖ್ಯಾತ ಗಾಯಕಿ ನಂದಿನಿ ರಾವ್, ಖ್ಯಾತ ಭಜನಾ ಹಾಡುಗಾರ್ತಿ ಸರೋಜಿನಿ ಡಿ . ಬಂಗೇರ , ಪಿಂಪ್ರಿ ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಮಿತಿಯ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಮಮತಾ ಅಂಚನ್ , ತುಳುಕೂಟದ ಹಿರಿಯ ಸದಸ್ಯೆ ಸವಿತಾ ಜಯ ಶೆಟ್ಟಿ , ಪುಣೆಯ ಭಾವನಾ ಡಾನ್ಸ್ ಸ್ಟುಡಿಯೋ ದ ನಿರ್ದೇಶಕಿ ಭಾವನಾ ದೇವಾಡಿಗ , ಪುಣೆ ಕುಲಾಲ ಸಂಘದ ಕಾರ್ಯಾಧ್ಯಕ್ಷೆ ಸರಸ್ವತಿ ಕುಲಾಲ್ ಯವರು ಆಗಮಿಸಲಿದ್ದಾರೆ .
ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ದೇವಿ ದುರ್ಗಾ ಪೂಜೆ ,ತೆನೆ ಪೂಜೆ ತುಳುಕೂಟದ ಮಹಿಳಾ ಸದಸ್ಯೆಯರಿಂದ ಭಜನಾ ಕಾರ್ಯಕ್ರಮ ,ಮತ್ತು ಮಹಾ ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ .
