

ಪುಣೆ; ಬಂಟ್ಸ್ ಅಸೋಸಿಯೇಷನ್ ಪುಣೆ ಇದರ ವತಿಯಿಂದ ನವರಾತ್ರಿಯ ಪ್ರಯುಕ್ತ ವಾರ್ಷಿಕ ದಸರಾ ಪೂಜೆ, ತೆನೆ ಹಬ್ಬ ಹಾಗೂ ದಾಂಡಿಯಾ ರಾಸ್ ಧಾರ್ಮಿಕ ಕಾರ್ಯಕ್ರಮವು ಅ 11 ಶುಕ್ರವಾರದಂದು ಸಂಜೆ ಗಂಟೆ 5.00 ರಿಂದ, ಪುಣೆಯ ಕ್ಯಾಂಪ್ ನಲ್ಲಿಯ ಪೂನಾ ಕ್ಲಬ್ ಸಿನೆಮಾ ಹಾಲ್ ನಲ್ಲಿ ವಿವಿದ ಧಾರ್ಮಿಕ ,ಮನೋರಂಜನಾ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು .
ಪುಣೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ನಗ್ರಿ ಗುತ್ತು ರೋಹಿತ್ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ದಸರಾ ಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪುಣೆಯ ಖ್ಯಾತ ವೈದ್ಯರಾದ ಡಾ ಚಿತ್ತರಂಜನ್ ಶೆಟ್ಟಿ ,ಹಾಗೂ ಗೌರವ ಅತಿಥಿಯಾಗಿ ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಮಹಿಳಾ ಕಾರ್ಯಧ್ಯಕ್ಷೆ ಪ್ರಭಾ ಎಸ್ .ಶೆಟ್ಟಿ ಯವರು ಆಗಮಿಸಲಿದ್ದಾರೆ .
ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಶ್ರೀ ದುರ್ಗಾ ಪೂಜೆ ,ತುಳುನಾಡಿನ ಸಾಂಪ್ರದಾಯಿಕ ಆಚರಣೆ ತೆನೆ ಹಬ್ಬ ಕಾರ್ಯಕ್ರಮ, ವೈವಿದ್ಯಮಯ ಗರ್ಭಾ ದಾಂಡಿಯಾ ನೃತ್ಯ ಕಾರ್ಯಕ್ರಮಗಳು ನಡೆಯಲಿದೆ.
ಮಹಿಳಾ ವಿಭಾಗ ಸದಸ್ಯೆಯರಿಂದ ಮತ್ತು ಯುವ ವಿಬಾಗ ಸದಸ್ಯರಿಂದ ವಿಶೇಷ ದಾಂಡಿಯಾ ನೃತ್ಯ .ನಡೆಯಲಿದೆ ವಿಶೇಷ ಆಕರ್ಷಣೆಯಾಗಿ ಮಹಿಳೆಯರಿಗೆ ನಾರಿಗೊಂದು ಸೀರೆ ಎಂಬ ಪ್ರತಿಭಾ ಸ್ಪರ್ದೆ ನಡೆಯಲಿದೆ .
ಅಲ್ಲದೆ ಪುರುಷರು ಮಹಿಳೆಯರು,ಮತ್ತು ಮಕ್ಕಳಿಗೆ ಉತ್ತಮ ವಸ್ತ್ರ ವಿನ್ಯಾಸದ ದಾಂಡಿಯಾ ನೃತ್ಯ ಪಟುವಿಗೆ ಬಹುಮಾನ ಘೋಷಿಸಲಾಗಿದೆ .