Breaking
15 Apr 2025, Tue

ಬಂಟರ ಸಂಘ ಪುಣೆ ಉತ್ತರ ವಲಯ ಪ್ರಾದೇಶಿಕ ಸಮಿತಿ ರಕ್ತದಾನ ,ಅರೋಗ್ಯ ತಪಾಸಣೆ.

ರೋಗ ಲಕ್ಷಣಗಳಿಗೆ ಅಸಡ್ಡೆ ಮಾಡದೆ ಪ್ರಥಮ ಹಂತದಲ್ಲೇ ಚಿಕಿತ್ಸೆ ಪಡೆಯಬೇಕು –ಡಾ ಸುಜಯ ಹೆಗ್ಡೆ


ಪುಣೆ :ದೇಹದಲ್ಲಿನ ಜೀವಕೋಶಗಳಲ್ಲಿನ ಬದಲಾವಣೆಯಿಂದ ಹೊಸ ಕೋಶಗಳು ಬೆಳವಣಿಗೆಗಳಿಂದ ಕ್ಯಾನ್ಸರ್ ನಂತಹ ರೋಗಗಳು ಬರುತ್ತದೆ . ಗೆಡ್ಡೆ ರೂಪದಲ್ಲಿ ಬೆಳೆಯುತ್ತವೆ. ಪ್ರಥಮ ಹಂತದಲ್ಲಿ ದೇಹದಲ್ಲಿ ಯಾರಿಗೂ ಗೊತ್ತಾಗದ ರೀತಿಯಲಿ ಇದು ಬೆಳೆಯುತ್ತದೆ . ಹಾಗೆಯೇ ದೇಹದಾದ್ಯಂತ ಹರುಡುವ ಲಕ್ಷಣ ಹೊಂದಿರುತ್ತದೆ .ಇದು ಒಂದು ಅನುವಂಶಿಕವಾಗಿ ಕಾಯಿಲೆಯಾಗಿದೆ. ತಂಬಾಕು ಸೇವನೆ ದೂಮಪಾನ ,ವ್ಯಾಯಾಮದ ಕೊರತೆ, ಮದ್ಯಪಾನ ,ಮತ್ತಿತರೇ ಕಾರಣಗಳಿಂದಲೂ ಬರಬಹುದು . ಸಾಮಾನ್ಯವಾಗಿ ಯಾರಿಗಾದರೂ ದೇಹದಲ್ಲಿನ ಬದಲಾವಣೆ, ಆಯಾಸ ,ನೋವು ಆಥವ ಇನ್ಯಾವುದೇ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ ಮಾಡದೆ, ಪರೀಕ್ಷೆ ಮಾಡಿಕೊಳ್ಳುವುದು ಒಳಿತು . ಇದರಿಂದ ನಮ್ಮ ದೇಹದಲ್ಲಿನ ಯಾವುದೇ ರೋಗ ಲಕ್ಷಣಗಳು ನಮಗೆ ಮೊದಲ ಹಂತದಲ್ಲಿಯೇ ತಿಳಿಯುತ್ತದೆ ಹಾಗೂ ಯಾವುದೇ ರೀತಿಯ ರೋಗ ಲಕ್ಷಣಗಳಿಗೆ ವಿಧ ವಿಧದ ಕಾರಣ ಒಡ್ಡಿ ಅಸಡ್ಡೆ ತೋರದೆ ಪ್ರಥಮ ಹಂತದಲ್ಲೇ ಚಿಕಿತ್ಸೆ ಪಡೆದರೆ ರೋಗಗಳನ್ನು ತಡೆಗಟ್ಟಬಹುದು . ಎಂದು ಡಾ ಸುಜಯ್ ಹೆಗ್ಡೆಯವರು ವಿಶೇಷವಾಗಿ ಸ್ತ್ರಿಯರಲ್ಲಿನ ಕ್ಯಾನ್ಸರ್ ಬಗ್ಗೆ ಉಪನ್ಯಾಸ ನೀಡಿದರು .
ಪುಣೆ ಬಂಟರ ಸಂಘದ ಸುವರ್ಣ ಮಹೋತ್ಸವದ ಕಾರ್ಯಕ್ರಮಗಳ ಉತ್ತರ ವಲಯ ಪ್ರಾದೇಶಿಕ ಸಮಿತಿ ವತಿಯಿಂದ ಸಂಘದ ಸಮಾಜ ಸೇವಾ ಕಾರ್ಯ ದಂಗವಾಗಿ ರಕ್ತದಾನ ಮತ್ತು ಉಚಿತ ಅರೋಗ್ಯ ತಪಾಸಣಾ ಶಿಬಿರ ಮತ್ತು ಕ್ಯಾನ್ಸರ್ ಕಾಯಿಲೆ ಬಗ್ಗೆ ಮತ್ತು ಕಾಳಜಿ ಬಗ್ಗೆ ಉಪನ್ಯಾಸ ವು ಅ 2 ರಂದು ಪುಣೆ ಗಣೇಶ್ ನಗರದ ಕನ್ನಡ ಸಂಘದ ಡಾ ಶ್ಯಾಮ್ ರಾವ್ ಕಲ್ಮಾಡಿ ಹೈಸ್ಕೂಲ್ ನ ಸಭಾಂಗಣದಲ್ಲಿ ನಡೆಯಿತು .

ಪುಣೆ ಬಂಟರ ಸಂಘದ ಉತ್ತರ ವಲಯ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ನಾರಾಯಣ ಹೆಗ್ಡೆ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ಕ್ಯಾನ್ಸರ್ ತಜ್ಞರಾದ ಡಾ ಸುಜಯ್ ಹೆಗ್ಡೆ , ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ, ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ವಿಶ್ವನಾಥ್ ಶೆಟ್ಟಿ , ಗೌರವ ಅತಿಥಿಗಳಾಗಿ ಆಗಮಿಸಿದ್ದ ಪುಣೆ ಬಂಟರ ಸಂಘದ ಪ್ರ .ಕಾರ್ಯದರ್ಶಿ ಅಜಿತ್ ಹೆಗ್ಡೆಯವರು ಉಪಸ್ಥಿರಿದ್ದರು . ವೇದಿಕೆಯಲ್ಲಿ , ಪುಣೆ ಬಂಟರ ಸಂಘದ ಉಪಾಧ್ಯಕ್ಷ ವೈ ಚಂದ್ರಹಾಸ್ ಶೆಟ್ಟಿ, ಪ್ರವೀಣ್ ಶೆಟ್ಟಿ ಪುತ್ತೂರು , ಮಹಿಳಾ ಕಾರ್ಯಾಧ್ಯಕ್ಷೆ ಸುಲತಾ ಎಸ್ .ಶೆಟ್ಟಿ , ಉತ್ತರ ಪ್ರಾದೇಶಿಕ ಸಮಿತಿ ಉಪಾಧ್ಯಕ್ಷ ವಸಂತ್ ಶೆಟ್ಟಿ , ಕಾರ್ಯದರ್ಶಿ ಪ್ರಸನ್ನ ಶೆಟ್ಟಿ ,ಮಹಿಳಾ ಕಾಯಧ್ಯಕ್ಷೆ ಪ್ರೇಮಾ ಅರ್ ಶೆಟ್ಟಿಯವರು ಉಪಸ್ಥಿತರಿದ್ದರು.
ವೇದಿಕೆಯಲ್ಲಿದ್ದ ಗಣ್ಯರು ದೀಪ ಪ್ರಜ್ವಲಿಸಿ ಈ ರಕ್ತದಾನ ,ಅರೋಗ್ಯ ಶಿಬಿರವನ್ನು ಉದ್ಘಾಟಿಸಿದರು . ನಾರಾಯಾಣ ಹೆಗ್ಡೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು . ಅತಿಥಿ ಗಣ್ಯರನ್ನು ಉತ್ತರ ವಲಯ ಸಮಿತಿಯ ಪದಾಧಿಕಾರಿಗಳು ಪುಷ್ಪ ಗುಚ್ಛ ನೀಡಿ ಗೌರವಿಸಿದರು . ಡಾ ಸುಜಯ ಹೆಗ್ಡೆಯವರನ್ನು ಶಾಲು ಪಲಪುಷ್ಪ ಸ್ಮರಣಿಕೆ ನೀಡಿ ಸತ್ಕರಿಸಲಾಯಿತು. ಸುಜಯ ಹೆಗ್ಡೆ ಯವರ ವೈದ್ಯಕೀಯ ಕ್ಷೇತ್ರದ ಸಾಧನೆಯ ಬಗ್ಗೆ ಪರಿಚಯವನ್ನು ಪದ್ಮಾಕ್ಷಿ ಸುರೇಶ್ ಶೆಟ್ಟಿ ಓದಿದರು ಹಾಗು ರಕ್ತದಾನದ ಬಗ್ಗೆ ಸವಿವರವಾಗಿ ಸಭೆಗೆ ತಿಳಿಸಿದರು . ಈ ಸಂದರ್ಭದಲ್ಲಿ ಮಹಿಳೆಯರಿಗಾಗಿ ಹೆಲ್ತ್ ಕಾರ್ಡ್ ನನ್ನು ಬಿಡುಗಡೆ ಮಾಡಲಾಯಿತು . ಇದರ ಅನುದಾನವನ್ನು ಉತ್ತರ ವಲಯದ ಸಮನ್ವಯಕರಾದ ಮಾಧವ್ ಶೆಟ್ಟಿ ಯವರು ವಹಿಸಿಕೊಂಡಿದ್ದರು. ಅವರಿಗೆ ಸಂಘದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು .
ಸಭೆಯಲ್ಲಿ ಉಪಸ್ಥಿತರಿದ್ದ ವಿವಿದ ಸಂಘ ಸಂಸ್ಥೆಗಳ ಅಧ್ಯಕ್ಷರುಗಳನ್ನು.ಪದಾಧಿಕಾರಿಗಳನ್ನು ,ವಿಶೇಷ ಆಮಂತ್ರಿತರನ್ನು, ದಾನಿಗಳನ್ನು,ಮತ್ತು ರಕ್ತ ಸಂಗ್ರಹ ಸಿಬ್ಬಂದಿ ವರ್ಗದವರನ್ನು ನಾರಾಯಣ ಹೆಗ್ಡೆ ಮತ್ತು ಸಮಿತಿ ಸದಸ್ಯರು ಪುಷ್ಪಗುಚ್ಛ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಉತ್ತರ ವಲಯದ ಪದಾಧಿಕಾರಿಗಳನ್ನು ಬಂಟ್ಸ್ ಸಂಘ ಪುಣೆಯ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಯವರು ಗೌರವಿಸಿದರು .

ಮಣಿಪಾಲ್ ಹಾಸ್ಪಿಟಲ್ ನ ಸಿಬ್ಬಂದಿ ವರ್ಗದವರು ರಕ್ತ ಸಂಗ್ರಹ ಮಾಡಿದರು ಮತ್ತು ವೈದ್ಯರುಗಳು ಅರೋಗ್ಯ ತಪಾಸಣೆ ಮಾಡಿ ಸೂಕ್ತ ಔಷಧಿ ಮತ್ತು ಸಲಹೆಗಳನ್ನು ನೀಡಿದರು . ರಕ್ತದಾನ ಮಾಡಿದ ರಕ್ತದಾನಿಗಳಿಗೆ ಆಕರ್ಷಕ ಉಡುಗೊರೆಯನ್ನು ಸಂಘದ ವತಿಯಿಂದ ನೀಡಲಾಯಿತು . ಅತಿ ಹೆಚ್ಚಿನ ಸಂಖ್ಯೆಯ ಎಲ್ಲಾ ಸಮಾಜ ಭಾಂದವರು ರಕ್ತದಾನ ಮಾಡಿ ಅರೋಗ್ಯ ತಪಾಸಣೆಯ ಸದುಪಯೋಗ ಪಡೆದರು . ಪುಣೆ ಬಂಟರ ಸಂಘದ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು, ದಕ್ಷಿಣ ಪೂರ್ವ ವಲಯದ ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳು, ಪುಣೆಯ ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು. ಉತ್ತರ ವಲಯ ಪ್ರಾದೇಶಿಕ ಸಮಿತಿಯ ನಿಕಟಪೂರ್ವ ಕಾರ್ಯಾಧ್ಯಕ್ಷ ಗಣೇಶ್ ಪೂಂಜಾ ,ಉಪಾಧ್ಯಕ್ಷರಾದ ಉದಯ ಶೆಟ್ಟಿ ಕಳತ್ತೂರು ,ಕೋಶಾಧಿಕಾರಿ ಸಂತೋಷ್ ಶೆಟ್ಟಿ ಅರೋಗ್ಯ ಸಮಿತಿ ಸಮನ್ವಯಕರಾದ ಆನಂದ್ ಶೆಟ್ಟಿ , ಹರೀಶ್ ಶೆಟ್ಟಿ ಸಕಾಲ್ , ರಾಜಾರಾಮ್ ಶೆಟ್ಟಿ, ದಿವಾಕರ್ ಶೆಟ್ಟಿ ,ಯಶವಂತ್ ಶೆಟ್ಟಿ ,ಪ್ರಕಾಶ್ ಶೆಟ್ಟಿ ,ರಾಘು ಶೆಟ್ಟಿ ,ಪ್ರದೀಪ್ ಶೆಟ್ಟಿ ,ವಸಂತ್ ಶೆಟ್ಟಿ ,ಮಂಜುನಾಥ್ ಶೆಟ್ಟಿ ಸುರೇಶ್ ಶೆಟ್ಟಿ ,ಪ್ರದೀಪ್ ಶೆಟ್ಟಿ ,ಸಿ ಎ ಉದಯ್ ಶೆಟ್ಟಿ ,ದಿವಾಕರ ಶೆಟ್ಟಿ ಮಾಣಿಬೆಟ್ಟು ,ಜಯಕರ್ ಶೆಟ್ಟಿ ,ಯೋಗಿಶ್ ಶೆಟ್ಟಿ, ಮಹಿಳಾ ವಿಭಾಗ ರೇಣುಕಾ ಡಿ ಶೆಟ್ಟಿ , ಶಕುಂತಲಾ ವಿ ಶೆಟ್ಟಿ , ಸುಕನ್ಯಾ ಶೆಟ್ಟಿ , ಅರುಣಾ ಶೆಟ್ಟಿ , ಶರ್ಮಿಳಾ ಶೆಟ್ಟಿ, ಜ್ಯೋತಿ ಹೆಗ್ಡೆ ,ಆಶಾ ಡಿ ಶೆಟ್ಟಿ, ಸರಿತಾ ಶೆಟ್ಟಿ , ನಿಕಿತಾ ಶೆಟ್ಟಿ, ಶರ್ಮಿಳಾ ಶೆಟ್ಟಿ , ಸಂಗೀತಾ ಶೆಟ್ಟಿ ,ರಂಜಿತಾ ಶೆಟ್ಟಿ ಮತ್ತು ಮಹಿಳಾ ವಿಬಾಗದ ಪದಾಧಿಕಾರಿಗಳು ಸಹಕರಿಸಿದರು. ಉದಯ ಶೆಟ್ಟಿ ಕಳತ್ತೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು .

ಪುಣೆ ಬಂಟರ ಸಂಘ ಎಂದರೆ ಸದೃಡವಾದ ಸಮಾಜದ ಸಂಘಟನೆ ಎಂಬ ಹೆಗ್ಗಳಿಕೆ ಗೌರವ ನಮಗೆ ವಿಶ್ವಮಟ್ಟದಲ್ಲಿ ಸಿಕ್ಕಿದೆ . ಮಾನವ ಧರ್ಮವನ್ನು ಅರಿತು ನಮ್ಮಿಂದಾದ ಕೊಡುಗೆಯನ್ನು ಸಮಾಜಕ್ಕೆ ನೀಡಿದ್ದೇವೆ . ಮತ್ತಷ್ಟು ಸೇವಾ ಕಾರ್ಯಗಳು ಸಲ್ಲಬೇಕು. ಸುವರ್ಣ ಮಹೋತ್ಸವದ ಕಾರ್ಯಕ್ರಮಗಳು ಶ್ರಿನಿವಾಸ ದೇವರ ಪ್ರಸಾದ ಸ್ವೀಕರಿಸುವ ಮೂಲಕ ನಾವು ಪ್ರಾರಂಭಿಸಿದ್ದೇವೆ . ಸಮಾಜಕ್ಕೆ ಪ್ರಯೋಜನಕಾರಿಯಾಗುವ ಸೇವಾ ಕಾರ್ಯಗಳನ್ನುಮಾಡುವ ಯೋಜನೆಗಳು ನಮ್ಮದು . ಇದಕ್ಕೆ ಜೊತೆಯಾಗಿ ನಮ್ಮ ನಾಲ್ಕು ವಲಯದ ಪ್ರಾದೇಶಿಕ ಸಮಿತಿಯವರ ಶಕ್ತಿ ಒಟ್ಟು ಸೇರಿಸಿಕೊಂಡು ಉತ್ತೇಜನ ಕಾರಿಯಾದ ಕಾರ್ಯ ಮಾಡುವ ಸಂಕಲ್ಪವನ್ನು ಸಮಿತಿಯವರು ಮಾಡಿಕೊಂಡಿದ್ದಾರೆ. ಈ ಸೇವಾ ಕಾರ್ಯಗಳಿಗೆ ನಮ್ಮ ಸಂಪೂರ್ಣ ಬೆಂಬಲವಿದೆ . ಅರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತು ನೀಡಿ ಸಂಘದ ಮೂಲಕ ಯೋಜನೆಗಳನ್ನು ರೂಪಿಸಿ ಸಮಾಜಕ್ಕೆ ಪ್ರಯೋಜಕಾರಿಯಾಗಿ ಕಾರ್ಯಗಳನ್ನು ಮಾಡಬೇಕು . ಸೇವಾ ಮನೋಭಾವದ ನಮ್ಮವರ ಸಹಕಾರದಿಂದ ಕಾರ್ಯಕ್ರಮಗಳು ಯಶಸ್ವಿಯಾಗಿ ಸಮಾಜಕ್ಕೆ ಅರ್ಪಣೆಯಾಗುತ್ತದೆ . ರಕ್ತದಾನ ಪುಣ್ಯದ ಕೆಲಸ ಇದರಲ್ಲಿ ದಾನ ಮಾಡಿದವರು ಕೂಡಾ ಅಷ್ಟೇ ಪುಣ್ಯವಂತರು ಸುಜಯ ಹೆಗ್ಡೆ ಕ್ಯಾನ್ಸರ್ ಬಗ್ಗೆ ಉತ್ತಮ ಮಾಹಿತಿಯನ್ನು ನೀಡಿದ್ದಾರೆ . ಆರೋಗ್ಯಕ್ಕೆ ಸಂಬಂದ ಪಟ್ಟಂತೆ ಅವರು ಸದಾ ನಮ್ಮೊಂದಿಗೆ ಇದ್ದಾರೆ. ನಾರಾಯಣ ಹೆಗ್ದೆಯವರು ಉತ್ತಮ ಚಿಂತನೆಯೊಂದಿಗೆ ಹಲವಾರು ಸಮಾಜ ಯೋಜನೆಗಳ ರೂಪಿಸಿ ಕೊಂಡವರು. ಅವರ ಕಾರ್ಯಗಳಿಗೆ ನಮ್ಮ ಬೆಂಬಲ ಪ್ರೋತ್ಸಾಹ ಇದೆ –ಶ್ರೀ ಸಂತೋಷ್ ಶೆಟ್ಟಿ ಇನ್ನಕುರ್ಕಿಲ್ ಬೆಟ್ಟು ಬಾಳಿಕೆ -ಅಧ್ಯಕ್ಷರು ಬಂಟರ ಸಂಘ ಪುಣೆ

ಸಂಘದ ಸಮರ್ಥ ನಾಯಕತ್ವದ ಜೊತೆಯಲ್ಲಿ ಎಲ್ಲಾ ಪ್ರಾದೇಶಿಕ ಸಮಿತಿಗಳ ಸಮಾಜ ಸೇವಾ ಮನೋಭಾವನೆಯಿಂದ ಅರ್ಥಪೂರ್ಣವಾದ ಕಾರ್ಯಕ್ರಮಗಳು ನಡೆಯುತಿವೆ .ಉದಾರ ಮನಸ್ಸಿನ ಹೃದಯವಂತ ಭಾಂದವರ ಸಹಕಾರ ಸದಾ ಸಿಗುತಿದೆ. ಮತ್ತಷ್ಟು ನಮ್ಮ ಸದೃಡ ಸಮಾಜ ನಿರ್ಮಾಣ ಆಗಬೇಕು . ರಕ್ತದಾನ ಅಂದರೆ ಜೀವದಾನ ಮಾಡಿದ ಹಾಗೆ, ಪುಣ್ಯದ ಪಲ ನಮಗೆ ಪ್ರಾಪ್ತಿಯಾಗುತ್ತದೆ. ಸುಜಯ ಹೆಗ್ಡೆಯವರು ಉತ್ತಮ ಜೀವ ಸಂರಕ್ಷಕರಾಗಿ ಕ್ಯಾನ್ಸರ್ ಬಗ್ಗೆ ಉಪನ್ಯಾಸ ನೀಡಿ ನಮಗೆ ಅರೋಗ್ಯ ಸಂರಕ್ಷಣೆಯ ಬಗ್ಗೆ ತಿಳಿಸಿಕೊಟ್ಟಿದ್ದಾರೆ –
ಶ್ರೀ ಅಜಿತ್ ಹೆಗ್ಡೆ ಪ್ರ .ಕಾರ್ಯದರ್ಶಿ- ಬಂಟರ ಸಂಘ ಪುಣೆ

ನಾವು ಪ್ರಾದೇಶಿಕ ಸಮಿತಿಯ ಮೂಲಕ ಸುಮಾರು ಹತ್ತು ವರ್ಷಗಳ ಹಿಂದೆ ಪ್ರಾರಂಭಿಸಿದ ರಕ್ತದಾನ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಾ ಬರುತಿದೆ . ನಮ್ಮ ಬಂಟರ ಸಂಘದ ಸುವರ್ಣ ಮಹೋತ್ಸವ ಮಾದರಿಯಾಗಿ ನಡೆಯಲಿ ನಾವೆಲ್ಲರೂ ಶ್ರಮಿಸೋಣ . ನಾರಾಯಣ ಹೆಗ್ಡೆ ಯವರು ಸಮಿತಿಯ ಎಲ್ಲರನ್ನುಸೇರಿಸಿಕೊಂಡು ಉತ್ತಮ ಸೇವಾಕಾರ್ಯವನ್ನು ಆಯೋಜನೆ ಮಾಡಿದ್ದಾರೆ – ಶ್ರೀ ಪ್ರವೀಣ್ ಶೆಟ್ಟಿ ಪುತ್ತೂರು ಉಪಾಧ್ಯಕ್ಷರು ಬಂಟರ ಸಂಘ ಪುಣೆ
ಆರೋಗ್ಯದ ಬಗ್ಗೆ ಕಾಳಜಿ ಬಹಳ ಮುಖ್ಯ. ಸುಜಯ ಹೆಗ್ಡೆ ಯವರು ಕ್ಯಾನ್ಸರ್ ಬಗ್ಗೆ ಉತ್ತಮ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ನಾವು ಆ ಪ್ರಕಾರ ನಾವು ಆರೋಗ್ಯದ ಬಗ್ಗೆ ಇರುವ ಯಾವುದೇ ಸಂದೇಹಗಳಿಗೆ ಸೂಕ್ತ ತಪಾಸಣೆ ಮತ್ತು ಚಿಕಿತ್ಸೆ ಪಡೆಯುವುದು ಮುಖ್ಯ. ರಕ್ತದಾನ ಅರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಉತ್ತರ ವಲಯದವರು ಸಮಾಜಕ್ಕೆ ಪ್ರಯೋಜನಕಾರಿಯಾಗಿ ಆಯೋಜಿಸಿದ್ದಾರೆ – ಶ್ರೀಮತಿ ಎಸ್ ಸುಲತಾ ಶೆಟ್ಟಿ –ಕಾರ್ಯಾಧ್ಯಕ್ಷೆ ಮಹಿಳಾ ವಿಭಾಗ -ಬಂಟರ ಸಂಘ ಪುಣೆ
ಸಮಾಜಕ್ಕೆ ಮತ್ತು ಸಂಘಕ್ಕೆ ಪೂರಕವಾಗಿ ನಮ್ಮ ಪ್ರಾದೇಶಿಕ ಸಮಿತಿಯ ಮೂಲಕ ಸಮಾಜ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಿದಾಗ ನಮಗೆ ಬೆನ್ನುತಟ್ಟಿ ಪ್ರೋತ್ಸಾಹ ನೀಡುವ ಬಂಟರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಹೃದಯ ವೈಶಾಲ್ಯತೆ ನಮಗೆ ಮತ್ತಷ್ಟು ಕಾರ್ಯ ಮಾಡಲು ಪ್ರೇರಣೆಯಾಗುತ್ತದೆ. ,ಹಾಗೆಯ ಸಮಿತಿಯ ಸದಸ್ಯರ ಉತ್ಸಾಹ ,ಮಹಿಳೆಯರ ಸಹಕಾರ ಮತ್ತು ಸಮಾಜ ಭಾಂದವರ ಪ್ರೋತ್ಸಾಹದಿಂದ ಈ ಕಾರ್ಯಕ್ರಮಗಳು ಉತ್ತಮ ಸಂಯೋಜನೆಯಲ್ಲಿ ಆಗಿದೆ . ಸಮಾಜದ ಪ್ರತಿಯೊಬ್ಬರಿಗೂ ಏನಾದರೂ ಪ್ರಯೋಜನಕಾರಿಯಾದ ಕೆಲಸ ಮಾಡುವ ನಮ್ಮ ಮನ ಸಂಕಲ್ಪ ಇದೆ ರೀತಿ ಮುಂದುವರಿಯಲಿದೆ . ಸಹಕರಿಸಿದ ಎಲ್ಲರಿಗೂ ದನ್ಯವಾದಗಳನ್ನು ಸಲ್ಲಿಸುತ್ತೇನೆ – ಶ್ರೀ ನಾರಾಯಣ ಹೆಗ್ಡೆ ಕಾರ್ಯಾಧ್ಯಕ್ಷರು ಉತ್ತರ ಪ್ರಾದೇಶಿಕ ಸಮಿತಿ ಬಂಟರ ಸಂಘ ಪುಣೆ

suvarna mahotsava

Leave a Reply

Your email address will not be published. Required fields are marked *