ಪುಣೆ : ಪುಣೆ ಕನ್ನಡ ಸಂಘ ,ಕಾವೇರಿ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ಸ್ ನ ಮಹಾಸಭೆಯು ಅ 5 ಶನಿವಾರದಂದು ಕನ್ನಡ ಸಂಘದ ಕನ್ನಡ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಜರಗಿತು .ಈ ಸಂದರ್ಭದಲ್ಲಿ ಕನ್ನಡ ಸಂಘದ ಕಾರ್ಯಕಾರಿ ಸಮಿತಿ ಯ ಸಭೆಯಲ್ಲಿ ಸಂಘದ ಅಧ್ಯಕ್ಷರಾಗಿ ಕುಶಲ್ ಹೆಗ್ಡೆ ಯವರನ್ನು ಅಧ್ಯಕ್ಷರಾಗಿ ಪುನರಾಯ್ಕೆ ಮಾಡಲಾಯಿತು .ಹಾಗೂ ಸಂಘದ ಟ್ರಸ್ಟಿಯಾಗಿ ಪುಣೆ ಬಂಟರ ಸಂಘದ ಭವನ ನಿರ್ಮಾಣದ ರೂವಾರಿ , ಸಂಘಟಕ, ಶಿಕ್ಷಣ ಮಹಾ ಪೋಷಕರು ,ಬಂಟರ ಸಂಘದ ಅಧ್ಯಕ್ಷರೂ ಆದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು .

ಟ್ರಸ್ಟಿಯಾಗಿ ಆಯ್ಕೆಯಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಯವರನ್ನು ಕುಶಲ್ ಹೆಗ್ಡೆ ಯವರು ಪುಷ್ಪಗುಚ್ಛ ನೀಡಿ ಅಭಿನಂದಿಸಿದರು .
ಪುಣೆ ಕನ್ನಡ ಸಂಘದ ಕಾವೇರಿ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ಸ್ ಗಳ ಆಡಳಿತಕೆ ಒಳಪಟ್ಟ 7 ಕಡೆಗಳಲ್ಲಿ ವಿದ್ಯಾ
ಸಂಸ್ಥೆಗಳು ಕಾರ್ಯಾಚರಿಸುತಿದ್ದು ಸುಮಾರು 10500 ವಿಧ್ಯಾರ್ಥಿಗಳು ವಿದ್ಯಾರ್ಜನೆ ಮಾಡುತಿದ್ದಾರೆ .ಉತ್ತಮ ಶಿಕ್ಷಣಕ್ಕೆ ಹೆಸರುವಾಸಿಯಾದ ಕಾವೇರಿ ವಿದ್ಯಾ ಸಂಸ್ಥೆಗಳು ಪ್ರತಿ ವರ್ಷ ಉತ್ತಮ ಪಲಿತಾಂಶ ದಾಖಲಿಸುವಲ್ಲಿ ನಿರಂತರ ಹೆಸರುವಾಸಿಯಾಗಿದ್ದು, ಪಾಲಕರು ತಮ್ಮ ಮಕ್ಕಳನ್ನು ವಿದ್ಯಾರ್ಜನೆಗೆ ಸೇರಿಸುವಲ್ಲಿ ಈ ವಿದ್ಯಾ
ಸಂಸ್ಥೆಗಳನ್ನು ಮೊದಲಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ .
ಪುಣೆಯಲ್ಲಿ ಕನ್ನಡದಲ್ಲಿ ವಿಧ್ಯಾಭ್ಯಾಸ ಮಾಡಲು ಈ ಕಾವೇರಿ ವಿದ್ಯಾ ಸಂಸ್ಥೆ ಬಹಳ ಪ್ರೋತ್ಸಾಹ ನೀಡುತಿದ್ದು ,ಅದೇ ರೀತಿ ಇಂಗ್ಲಿಷ್ ಮಾಧ್ಯಮದಲ್ಲೂ ಪ್ರಾಥಮಿಕ ವರ್ಗದಿಂದ ಪದವಿ ಮತ್ತು ಬೇರೆ ಬೇರೆ ಸ್ನಾತಕೋತ್ತರ ಪದವಿ ಪಡೆಯಲು ಈ ವಿದ್ಯಾ ಸಂಸ್ಥೆ ಅನುಕೂಲಕರವಾಗಿದೆ . ಇಂತಹ ಪ್ರಥಮ ದರ್ಜೆಯ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಕುಶಲ್ ಹೆಗ್ಡೆ ಯವರು ಹಲವಾರು ವರ್ಷಗಳಿಂದ ಉತ್ತಮ ಸೇವೆಯನ್ನು ನೀಡಿದವರಾಗಿದ್ದು ಆಡಳಿತ ಮಂಡಳಿ ಅವರನ್ನೇ ಪುನರಾಯ್ಕೆ ಮಾಡಲಾಗಿದೆ .
ಬಂಟರ ಸಂಘದ ಅಧ್ಯಕ್ಷರಾಗಿ ಶಿಕ್ಷಣ ಮತ್ತು ಸಮಾಜ ಕಲ್ಯಾಣಕ್ಕೆ ಮಹತ್ವ ನೀಡಿ ಕಲ್ಪವೃಕ್ಷ ಎಂಬ ಹೆಸರಿನಲ್ಲಿ ಸಮಿತಿಯನ್ನು ರಚಿಸಿ ಆ ಮೂಲಕ ಸಮಾಜದ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಮಹತ್ಕಾರ್ಯವನ್ನು ಸಂತೋಷ್ ಶೆಟ್ಟಿ ಯವರು ಮಾಡಿ ತೋರಿಸಿದ್ದಾರೆ . ಎಲ್ಲಾ ಸಮಾಜದ ಕಡು ಬಡವರ ಮಕ್ಕಳಿಗೆ ಕೂಡಾ ಶಿಕ್ಷಣ ಸಿಗಬೇಕು ಎಂಬ ಕಾಳಜಿ ಹೊಂದಿರುವ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಯವರು ತನ್ನ ಸೇವೆಯನ್ನು ವಿಸ್ತರಿಸುವಲ್ಲಿ ಕನ್ನಡ ಸಂಘದ ಕಾವೇರಿ ವಿದ್ಯಾ ಸಂಸ್ಥೆಗಳ ಟ್ರಸ್ಟಿ ಯಾಗಿ ಆಯ್ಕೆಯಾಗಿದ್ದಾರೆ .ಇವರಿಬ್ಬರಿಗೂ ಪುಣೆ ಬಂಟರ ಸಂಘದ ಪದಾಧಿಕಾರಿಗಳು ಹಾಗೂ ಪುಣೆಯ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಶುಭ ಹಾರೈಸಿದ್ದಾರೆ .