ಸಮಾಜಕ್ಕೆ ನೀಡುವ ಪ್ರೀತಿ ,ವಿಶ್ವಾಸ , ಪರೋಪಕಾರವನ್ನು, ಮರಳಿ ಪಡೆಯುತ್ತೇವೆ -ಮುರುಳೀಧರ ಮೊಹೊಲ್
ಪುಣೆ ; ನಮ್ಮ ಹಿಂದೂ ಸನಾತನ ಧರ್ಮದ ವೈವಿಧ್ಯಮಯ ಜನ ಸಮುದಾಯ ವಿಭಿನ್ನ ಸಂಪ್ರದಾಯ, ಸಂಸ್ಕೃತಿ ಆಚರಣೆಗಳು ನಮ್ಮವರ ಹಿಂದಿನ ಪರಂಪರೆಯಿಂದ ನಡೆದಿಕೊಂಡು ಬಂದಿದೆ . ನಮ್ಮ ಶ್ರೇಷ್ಠ , ಧಾರ್ಮಿಕ ಆಚರಣೆಗಳು ಆಯಾಯ ರೀತಿಯ ನಂಬಿಕೆ , ಪದ್ಧತಿಗಳ ಮೂಲಕ ಅನನ್ಯತೆಗೆ ಸಾಕ್ಷಿಯಾಗಿವೆ . ನವರಾತ್ರಿಯ ಶುಭ ಸಂದರ್ಭದಲ್ಲಿ ಪುಣೆ ಬಂಟ ಸಮಾಜದ ಮೂಲಕ ನವರಾತ್ರಿ ದಸರಾ ಸಂಪ್ರದಾಯ ಉತ್ಸವ ತಮ್ಮ ರೂಢಿಗತವಾದ ಸಂಪ್ರದಾಯ ಮತ್ತು ಭಕ್ತಿ ಶ್ರದ್ಧೆಯಿಂದ ಇಲ್ಲಿ ನಡೆದಿದೆ. ಶ್ರೀ ದುರ್ಗಾದೇವಿಯ ಆರಾಧನೆ ಪೂಜೆ ಪುನಸ್ಕಾರದಿಂದ ಮನಶಾಂತಿ , ಸಂತೃಪ್ತಿ, ಸಮೃದ್ಧಿ, ಹೊಂದಲು ಸಾಧ್ಯ ಮತ್ತು ಅದನ್ನೇ ನಾವು ಜೀವನದಲ್ಲಿ ಖಂಡಿತವಾಗಿ ಮರಳಿ ಪಡೆಯುತ್ತೇವೆ ಎಂದು ಕೇಂದ್ರ ಸರಕಾರದ ಸಚಿವ ಪುಣೆ ಸಂಸದರಾದ ಮುರುಳೀಧರ್ ಮೋಹೋಲ್ ನುಡಿದರು. ಪುಣೆ ಬಂಟರ ಸಂಘದ ನವರಾತ್ರಿ ಉತ್ಸವ , ತೆನೆಹಬ್ಬ , ದಾಂಡಿಯಾ ಕಾರ್ಯಕ್ರಮವು ಅಕ್ಟೋಬರ್ ೧೨ ರಂದು ಬಹಳ ವಿಜೃಂಭಣೆಯಿಂದ ಜರಗಿತು . ಈ ಉತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಮುರಳೀಧರ್ ಮೋಹಲ್ರವರು ಸಮಾಜದ ಶಕ್ತಿಯನ್ನು ಒಟ್ಟುಗೂಡಿಸಿಕೊಂಡು ನಾಯಕತ್ವ ವಹಿಸಿಕೊಂಡು ಸಮಾಜಕ್ಕಾಗಿ ಭವ್ಯ ಭವನ ನಿರ್ಮಾಣ ಮಾಡಿ ಸೇವಾ ಕಾರ್ಯಗಳ ಮೂಲಕ ಬಂಟರು ಉತ್ತಮ ಕಾರ್ಯ ಮಾಡುತ್ತಿದ್ದಾರೆ . ನಿಮ್ಮ ಬೇಡಿಕೆಯಂತೆ ಪುಣೆಯಿಂದ ಮಂಗಳೂರಿಗೆ ದಿನನಿತ್ಯ ವಿಮಾನ ಸೇವೆ ಒದಗಿಸುವಲ್ಲಿ ನಾನು ಶಕ್ತಿ ಮೀರಿ ಪ್ರಯತ್ನಿಸಿ ಈಡೇರಿಸುತ್ತೇನೆ ಎಂದರು. ನವರಾತ್ರಿಯ ಉತ್ಸವದ ಅಂಗವಾಗಿ ಮೊದಲಿಗೆ ಕಾತ್ರಾಜ್ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ಹರೀಶ್ ಭಟ್ರ ನೇತೃತ್ವದಲ್ಲಿ ಕಲ್ಪೋಕ್ತ ದುರ್ಗಾನಮಸ್ಕಾರ ಪೂಜೆ ಜರಗಿತು. ನಂತರ ಸಂಘದ ಸದಸ್ಯರ ಉಪಸ್ಥಿತಿಯಲ್ಲಿ ಪ್ರತಿವರ್ಷದಂತೆ ತುಳುನಾಡಿನ ಸಾಂಪ್ರದಾಯಿಕ ಆಚರಣೆ ಕದಿರು ಕಟ್ಟುವ ಸಮಾರಂಭವು ಬಂಟರ ಭವನದ ಚಾವಡಿಯಲ್ಲಿ ಜರಗಿತು . ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ , ಶಮ್ಮಿ ಹೆಗ್ಡೆ ದಂಪತಿಗಳು ತೆನೆ ಕಟ್ಟುವ ಪುಣ್ಯ ಕಾರ್ಯವನ್ನು ತುಳುನಾಡ ಸಂಪ್ರದಾಯ ಪ್ರಕಾರ ನೆರವೇರಿಸಿದರು . ಸುಮಂಗಲೆಯರು ಆರತಿ ಬೆಳಗಿದರು . ಸೇರಿದ ಸಮಾಜ ಭಾಂದವರಿಗೆ ತೆನೆ ವಿತರಿಸಲಾಯಿತು .

ನಂತರ ಪುಣೆ ಬಂಟರ ಸಂಘ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ಬೆಟ್ಟು ಬಾಳಿಕೆಯವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮಹಾರಾಷ್ಟ್ರ ಸರಕಾರದ ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಸಚಿವರಾದ ಶ್ರೀ ಚಂದ್ರಕಾಂತ್ ದಾದಾ ಪಾಟೀಲ್ , ಕೇಂದ್ರ ಸರಕಾರದ ಸಚಿವ ಪುಣೆ ಸಂಸದರಾದ ಮು ಮುರುಳೀಧರ ಮೊಹೊಲ್ , ಗೌರವ ಅತಿಥಿಗಳಾಗಿ ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಮಹಿಳಾ ಕಾರ್ಯಾಧ್ಯಕ್ಷೆ ಪ್ರಭಾ ಸ್ ಶೆಟ್ಟಿ ಭಾರಮತಿಯ ಹೋಟೆಲ್ ಉದ್ಯಮಿ ಪುಣೆ ಬಂಟರ ಸಂಘದ ಟ್ರಸ್ಟೀ ಶ್ರೀಧರ್ ಶೆಟ್ಟಿ , ಬಂಟ್ಸ್ ಅಸ್ಸೊಸಿಯೆಷನ್ ನ ಮಹಿಳಾ ಕಾರ್ಯಾಧ್ಯಕ್ಷೆ ರೇಷ್ಮಾ ಎಸ ಶೆಟ್ಟಿ , ಸಂಘದ ಸುವರ್ಣ ಮಹೋತ್ಸವದ ಸಮಿತಿಯ ಗೌರವಾಧ್ಯಕ್ಷ ಕುಶಾಲ್ ಹೆಗ್ಡೆ , ಕಾರ್ಯಾಧ್ಯಕ್ಷ ವಿಶ್ವನಾಥ್ ಶೆಟ್ಟಿ , ಸಂಘದ ಮಾಜಿ ಅಧ್ಯಕ್ಷ ಸದಾನಂದ್ ಕೆ ಶೆಟ್ಟಿ , ಉಪಾದ್ಯಕ್ಷರುಗಳಾದ ಚಂದ್ರಹಾಸ್ ವೈ ಶೆಟ್ಟಿ, ಪ್ರವೀಣ್ ಶೆಟ್ಟಿ ಪುತ್ತೂರು, ಕಾರ್ಯದರ್ಶಿ ಅಜಿತ್ ಹೆಗ್ಡೆ , ಕೋಶಾಧಿಕಾರಿ ಪ್ರಶಾಂತ್ ಶೆಟ್ಟಿ ,ಸಂಘದ ಸುವರ್ಣ ಮಹೋತ್ಸವದ ಸಮಿತಿಯ ಮಹಿಳಾ ಗೌರವಾಧ್ಯಕ್ಷರು ಜಯಂತಿ ಶೆಟ್ಟಿ, ಕಾರ್ಯಾಧ್ಯಕ್ಷೆ ದೇವಿಕಾ ಯು ಶೆಟ್ಟಿ, ಸಂಘದ ಕಾರ್ಯಾಧ್ಯಕ್ಷೆ ಸುಲತಾ ಸ್ ಶೆಟ್ಟಿ , ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರು ಗಳಾದ ಶೇಖರ್ ಶೆಟ್ಟಿ, ನಾರಾಯಣ್ ಹೆಗ್ಡೆ, ಸುನಿಲ್ ಶೆಟ್ಟಿ, ಕಾರ್ಯಾಧ್ಯಕ್ಷೆ ಯರುಗಳಾದ ಪ್ರೇಮ ಆರ್ ಶೆಟ್ಟಿ , ಯಶೋದಾ ಶೆಟ್ಟಿ , ಕೃತಿ ಶೆಟ್ಟಿ ಯವರು ಉಪಸ್ಥಿತರಿದ್ದರು.

ವೇದಿಕೆಯಲ್ಲಿದ್ದ ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮಕೆ ಚಾಲನೆ ನೀಡಿದರು . ಯಶೋದಾ ಶೆಟ್ಟಿ ಪ್ರಾರ್ಥನೆಗೈದರು. ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ಬೆಟ್ಟು ಸ್ವಾಗತಿಸಿ ಪ್ರಸ್ತಾವನೆಗೈದರು. ಹಾಗು ಮುರುಳೀಧರ ಮೊಹೊಲ್ ರವರಿಗೆ ಪುಣೆಯಿಂದ ಮಂಗಳೂರಿಗೆ ದಿನನಿತ್ಯ ವಿಮಾನ ಸೇವೆ ಒದಗಿಸುವಂತೆ ಮನವಿ ಸಲ್ಲಿಸಿದರು .
ಪ್ರತಿವರ್ಷದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಒಂಭತ್ತು ಮಹಿಳೆಯರಿಗೆ ನವದುರ್ಗ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು. ಅವರಲ್ಲಿ ಮಾರ್ಷಲ್ ಆರ್ಟ್ಸ್ ಮತ್ತು ಸಾಮಾಜಿಕ ಸುಧಾರಕಿ ಶ್ರೀಮತಿ ಶಾಂತ ಬಾಯಿ ಪವಾರ್ , ಮಹಿಳಾ ಸಬಲೀಕರಣ ಮತ್ತು ಮಕ್ಕಳ ಕಲ್ಯಾಣ ಸೇವಕಿ ಸುಷ್ಮಾ ಆಪ್ಟೆ , ವಿಜ್ಞಾನಿ ಡಾ ದೀಪ ಶೆಟ್ಟಿ , ಸಾಮಾಜಿಕ ಸುಧಾರಣೆ ಮತ್ತು ಮಹಿಳಾ ಸಬಲೀಕರಣ ಸೇವಕಿ ಸ್ವಾತಿ ದಾಮ್ಲೆ , ಗ್ರಾಮೀಣ ಪ್ರದೇಶದಲ್ಲಿ ಅರೋಗ್ಯ ಜಾಗೃತಿ ಮೂಡಿಸುವ ಡಾ ಪ್ರಜ್ಞಾ ಭಾಲೆರಾವ್ , ಗ್ರಾಮೀಣ್ ಜನರ ಕಾಳಜಿ ಬಗ್ಗೆ ಪ್ರಾತಿನಿಧ್ಯ ವಹಿಸುವ ನಿಖಿತಾ ಸಿ ರಾನಡೆ , ಸಾಮಾಜಿಕ ಸುಧಾರಣೆ ಮಹಿಳಾ ಸಬಲೀಕರಣ ಮಾನವತಾವಾದಿ ಸುಜಾತ ಯಾದವ್ , ಮಹಿಳಾಕೇಂದ್ರಿತ ಅಪರಾಧ ಪತ್ತೆ ಮತ್ತು ತನಿಖೆಯ ಮಹಿಳಾ ಪೊಲೀಸ್ ಅಧಿಕಾರಿ ವರ್ಷ ಕಾಲೇ ಚೌದರಿ , ಸಾಮಾಜಿಕ ಮತ್ತು ಮಾನವೀಯ ಸೇವೆಯ ಮಾನವತಾವಾದಿ ಸಿಸ್ಟರ್ ಲೂಸಿ ಯವರಿಗೆ ಕಾರ್ಯಾಧ್ಯಕ್ಷೆ ಸುಲತಾ ಶೆಟ್ಟಿ ಮತ್ತು ಮಹಿಳಾ ಪದಾಧಿಕಾರಿಗಳು ಶಾಲು ಫಲ ಪುಷ್ಪ ಸ್ಮರಣಿಕೆ ನೀಡಿ ಶ್ರೀ ನವದುರ್ಗ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದರು . ಸನ್ಮಾನಿತರು ಶುಭ ನುಡಿಗಳ ಮೂಲಕ ಕೃತಜ್ಞತೆ ಸಲ್ಲಿಸಿದರು .

ಮುಖ್ಯ ಅತಿಥಿಗಳಾದ ಸಚಿವರಾದ ಚಂದ್ರಕಾಂತ್ ಪಾಟೀಲ್, ಮುರಳೀಧರ್ ಮಾಹೇಲ್, ಶ್ರೀಧರ್ ಶೆಟ್ಟಿ ದಂಪತಿಗಳು , ಪ್ರಭಾ ಎಸ ಶೆಟ್ಟಿ ದಂಪತಿಗಳು , ರೇಷ್ಮಾ ಶೆಟ್ಟಿ ದಂಪತಿಗಳನ್ನು ಶಾಲು ಫಲ ಪುಷ್ಪ ಸ್ಮರಣಿಕೆ ನೀಡಿ ಸಂಘದ ವತಿಯಿಂದ ಸಂತೋಷ್ ಶೆಟ್ಟಿ ಮತ್ತು ಸುಲತಾ ಶೆಟ್ಟಿ ಯವರು ಸತ್ಕರಿಸಿದರು . ವಿವಿಧ ಸಂಘ ಸಂಸ್ಥೆಗಳ ಅದ್ಯಕ್ಷರುಗಳನ್ನು ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು . ವೇದಿಕೆಯಲ್ಲಿದ್ದ ಗಣ್ಯರು ಶುಭ ನುಡಿಗಳ ಮೂಲಕ ಹಾರೈಸಿದರು .
ನಂತರ ಬಂಟರ ಸಂಘದ ಮಹಿಳಾ ವಿಭಾಗ , ಪ್ರಾದೇಶಿಕ ಸಮಿತಿಯಿಂದ , ಯುವ ವಿಭಾಗದಿಂದ ಮತ್ತು ಸಾಮೂಹಿಕ ದಾಂಡಿಯಾ ರಾಸ್ ನೃತ್ಯ ಕಾರ್ಯಕ್ರಮ ಜರುಗಿತು . ವಿಶೇಷತೆಯಾಗಿ ಮಹಿಷಾಸುರ ಮರ್ಧಿನಿ ನೃತ್ಯ ರೂಪಕ ನಡೆಯಿತು . ಹೆಚ್ಚಿನ ಸಂಖ್ಯೆಯ ಮಹಿಳೆಯರು ಪುರುಷರು ಮಕ್ಕಳು ಭಾಗವಹಿಸಿದ್ದರು .
ಸಂಘದ ಪದಾಧಿಕಾರಿಗಳ ಸಹಕಾರ ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಯಿತು. ಶ್ರೀಮತಿ ಅಕ್ಷತ ಸುಜಿತ್ ಶೆಟ್ಟಿ ಮತ್ತು ಕಿಶೋರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು . ಮಹಿಳಾ ಕಾರ್ಯಾಧ್ಯಕ್ಷೆ ಸುಲತಾ ಶೆಟ್ಟಿ ವಂದಿಸಿದರು .

ನಾವು ನಮ್ಮ ಜನ್ಮಭೂಮಿಯಿಂದ ಬಂದು ಇಲ್ಲಿ ಕರ್ಮಾ ಭೂಮಿಯಲ್ಲಿ ನೆಲೆ ಕಂಡು ಕೊಂಡವರು .. ನವರಾತ್ರಿಯ ಈ ಶುಭ ಸಂದರ್ಭದಲ್ಲಿ ನಮ್ಮ ಭವನದ ಚಾವಡಿಯ ಶ್ರೀ ದೇವಿಯ ಸನ್ನಿಧಿಯಲ್ಲಿ ನಮ್ಮ ಸಂಸ್ಕೃತಿಯಂತೆ ತೆನೆ ಹಬ್ಬವನ್ನು ಆಚರಿಸಿದ್ದೇವೆ . ಅದೇ ರೀತಿ ನಮ್ಮ ಕರ್ಮ ಭೂಮಿಯಲ್ಲಿ ಅತ್ಯಂತ ಸಂಧಿಗ್ಧ ಪರಿಸ್ಥಿತಿಯಲ್ಲಿ ಸಮಾಜ ಸೇವೆಯಲ್ಲಿಯೇ ತೃಪ್ತಿ ಕಾಣುವ ಸಮಾಜ ಸೇವೇಕಿಯರು ಮತ್ತು ಮಾನವತಾವಾದಿಯವರನ್ನು ಆರಿಸಿ ಅವರಿಗೆ ನವದುರ್ಗ ಪ್ರಶಸ್ತಿ ಪ್ರಧಾನ ಮಾಡುವ ವಿನೂತನ ಕಾರ್ಯಕ್ರಮ ಆಯೋಜನಗೊಂಡಿದೆ . ಮಹಿಳಾ ವಿಭಾಗದವರ ಈ ಕಾರ್ಯ ಅರ್ಥಪೂರ್ಣವಾಗಿದೆ . ನಮ್ಮ ಆಹ್ವಾನದಂತೆ ಮುಖ್ಯ ಅತಿಥಿ ಗಣ್ಯರೆಲ್ಲರೂ ಆಗಮಿಸಿ ಕಾರ್ಯಕ್ರಮವನ್ನು ಚಂದಗಾಣಿಸಿಕೊಟ್ಟಿದ್ದಾರೆ . ಸುವರ್ಣ ಮಹೋತ್ಸವದ ಕಾರ್ಯಕ್ರಮಗಳು ಬಹಳ ವೈಶಿಷ್ಟ್ಯತೆಯೊಂದಿಗೆ ಸಮಾಜಮುಖಿಯಾಗಿ ವಿನೂತನ ರೀತಿಯಲ್ಲಿ ನಡೆಯಲಿಕ್ಕಿದೆ . ನಮ್ಮ ಹಿರಿಯರು ಮಾಜಿ ಅಧ್ಯಕ್ಷರುಗಳು , ದಾನಿಗಳು , ಚಿಂತಕರ ಚಾವಡಿ , ಕಲ್ಪವೃಕ್ಷ ಸಮಾಜ ಕಲ್ಯಾಣ ಯೋಜನೆಯ ದಾನಿಗಳು, ಟ್ರಸ್ಟೀಗಳು ಸಮಾಜ ಬಾಂಧವರ ಸಹಕಾರದೊಂದಿಗೆ ಈ ಎಲ್ಲ ಕಾರ್ಯಕ್ರಮಗಳು ನಡೆಯಲಿಕ್ಕಿದೆ . ಮುಂದಿನ ಎಲ್ಲ ಕಾರ್ಯಕ್ರಮಗಳು ಸಾಮಾಜಿಕ ಸೇವೆಯೊಂದಿಗೆ ಅರ್ಥಪೂರ್ಣವಾಗಿ ಆಚರಿಸೋಣ .
– ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ಬೆಟ್ಟು ಬಾಳಿಕೆ ಅಧ್ಯಕ್ಷರು ಬಂಟರ ಸಂಘ ಪುಣೆ .

ಬಂಟರ ಯಾವುದೇ ಕಾರ್ಯಕ್ರಮಗಳು ಇರಲಿ ಬಹಳ ವೈಶಿಷ್ಟ್ಯಪೂರ್ಣವಾಗಿ ನಡೆಯುತ್ತವೆ . ಪ್ರೀತಿ ವಿಶ್ವಾಸ ಪರೋಪಕಾರ ಸಾಧನೆಗೆ ಇನ್ನೊಂದು ಹೆಸರು ಬಂಟರು . ನಿಮ್ಮ ಸಮಾಜ ಸೇವೆ , ಧಾರ್ಮಿಕ ಸೇವೆ , ಕಲಾ ಸೇವೆ ಎಲ್ಲವು ಅರ್ಥಪೂರ್ಣವಾಗಿದೆ . ಇಲ್ಲಿ ಇಂದು ಸ್ತ್ರೀ ಶಕ್ತಿಯ ಆರಾಧನೆ ದುರ್ಗಾ ಪೂಜೆ ದಾಂಡಿಯಾ ಕಾರ್ಯಕ್ರಮ ನಡೆಯುತ್ತಿದೆ. ನಾನು ಕೂಡ ನಿಮ್ಮವನೇ ನಿಮ್ಮೊಂದಿಗೆ ಸದಾ ಇದ್ದೇನೆ . ಸೇರಿದ ಎಲ್ಲರಿಗು ವಿಜಯ ದಶಮಿಯ ಶುಭಾಶಯಗಳು.
– ಶ್ರೀ ಚಂದ್ರಕಾಂತ್ ದಾದ ಪಾಟೀಲ್ ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಸಚಿವರು ಮಹಾರಾಷ್ಟ್ರ ಸರಕಾರ
ನಮ್ಮ ಯಾವುದೇ ಕಾರ್ಯಕ್ರಮಗಳಿರಲಿ ಸಂತೋಷ್ ಶೆಟ್ಟಿ ಯವರ ನಾಯಕತ್ವದಲ್ಲಿ ಬಹಳ ವಿನೂತನ ಶೈಲಿಯಲ್ಲಿ ವಿಶೇಷತೆಯೊಂದಿಗೆ ನಡೆಯುತ್ತದೆ . ಬಹಳ ಶ್ರದ್ಧೆಯಿಂದ ಕಾರ್ಯ ಗೈಯುವ ಎಲ್ಲ ವಿಭಾಗದ ಪದಾಧಿಕಾರಿಗಳು ಮಹಿಳಾ ವಿಭಾಗ , ಯುವ ವಿಭಾಗ , ಪ್ರಾದೇಶಿಕ ಸಮಿತಿಯವರ ಸಹಕಾರವೇ ಯಶಸ್ವಿಗೆ ಕಾರಣ . ನವದುರ್ಗ ಪ್ರಶಸ್ತಿ ಸ್ವೀಕರಿಸಿದ ನವ ಮಾತೆಯರ ಆಶೀರ್ವಾದ ನಮಗೆ ಸದಾ ಸಿಗಲಿದೆ . ಸಹಕರಿಸಿದ ಎಲ್ಲರಿಗು ಕಾರ್ಯಕ್ರಮದ ಯಶಸ್ಸನ್ನು ಅರ್ಪಿಸುತ್ತೇನೆ .
– ಶ್ರೀಮತಿ ಸುಲತಾ ಶೆಟ್ಟಿ ಕಾರ್ಯಧ್ಯಕ್ಷೆ ಮಹಿಳಾ ವಿಭಾಗ ಬಂಟರ ಸಂಘ ಪುಣೆ .
ನವರಾತ್ರಿಯ ಈ ಹಬ್ಬ ದೇವಿ ಭಗವತಿ ಆರಾಧನೆಗೆ ಪ್ರಸಿದ್ಧವಾಗಿದೆ . ಈ ಸಂದರ್ಭದಲ್ಲಿ ನಾವು ಇಲ್ಲಿ ಸೇರಿರುವುದು, ಸಡಗರ ಸಂಭ್ರಮ ಹಂಚಿಕೊಳ್ಳುವುದು ಉತ್ತಮ ಕೆಲಸ. ನಮ್ಮ ಸಂಸ್ಕೃತಿ ಹಬ್ಬ ಕ್ಕೆ ಮಹತ್ವವಿದೆ,. ಬಂಟರ ಸಂಘದ ಸುವರ್ಣ ಸಂಭ್ರಮಕ್ಕೆ ಶುಭ ಹಾರೈಸುತ್ತೇನೆ .
– ಪ್ರಭಾ ಎಸ್ ಶೆಟ್ಟಿ ದ ಮಹಿಳಾ ಕಾರ್ಯಾಧ್ಯಕ್ಷೆ ಬಂಟರ ಸಂಘ ಪಿಂಪ್ರಿ ಚಿಂಚ್ವಾಡ್
ಸಮಾಜದಲ್ಲಿ ಯಾವುದೇ ರೀತಿಯ ಪ್ರಚಾರವನ್ನು ಬಯಸದೆ ವಿವಿಧ ಕ್ಷೇತ್ರದಲ್ಲಿ ಸಮಾಜ ಸೇವೆ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡ ಒಂಭತ್ತು ಸ್ತ್ರೀಯರನ್ನು ಗುರುತಿಸಿ ನವದುರ್ಗ ಪ್ರಶಸ್ತಿಯನ್ನು ನೀಡಿದ ನಿಮ್ಮ ಕಾರ್ಯ ಶ್ಲಾಘನೀಯ. , ನಮ್ಮ ಕಲೆ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಬಂಟರ ಸಂಘ ಸದಾ ಶ್ರಮಿಸುತ್ತಿದೆ. ನನಗೆ ಇಲ್ಲಿ ಕರೆದು ಗೌರವಿಸಿ ಸತ್ಕರಿಸಿದ್ದೀರಿ ಹೆಮ್ಮೆ ಎನಿಸುತಿದೆ. ಸುವರ್ಣ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿ ಎಂದು ಶುಭ ಹಾರೈಸುತ್ತೇನೆ
– ಶ್ರೀಮತಿ ರೇಷ್ಮಾ ಶೆಟ್ಟಿ ಕಾರ್ಯಧ್ಯಕ್ಷೆ ಬಂಟ್ಸ್ ಅಸ್ಸೊಸಿಯೆಷನ್ ಪುಣೆ.
