ಪುಣೆ : ಸುವರ್ಣ ಸಂಭ್ರಮದಲ್ಲಿರುವ ಪುಣೆ ಬಂಟರ ಸಂಘದ ಸರಣಿ ಕಾರ್ಯಕ್ರಮದ ಅಂಗವಾಗಿ ಬಂಟರ ಸಂಘ ಪುಣೆ ಉತ್ತರ ಪ್ರಾದೇಶಿಕ ವಲಯ ಇವರ ಆಶ್ರಯದಲ್ಲಿ ಅ ೨ ರ ಗಾಂಧಿಜಯಂತಿಯಂದು ಬೆಳಗ್ಗೆ8.30 ರಿಂದ ಮದ್ಯಾಹ್ನ 2 ಗಂಟೆಯ ವರೆಗೆ ಡಾ . ಕಲ್ಮಾಡಿ ಶ್ಯಾಮರಾವ್ ಹೈ ಸ್ಕೂಲ್ ಗಣೇಶನಗರ ಎರಂದವನೆ ಇಲ್ಲಿ ಬ್ರಹತ್ ರಕ್ತದಾನ ಶಿಬಿರ ಮತ್ತು ಉಚಿತ ವೈದ್ಯಕೀಯ ತಪಾಸಣಾ ಶಿಬಿರವು ನಡೆಯಲಿದೆ.
ಕಾರ್ಯಕ್ರಮವನ್ನು ಪುಣೆ ಬಂಟರ ಸಂಘದ ಅಧ್ಯಕ್ಷರಾದ ಶ್ರೀ ಸಂತೋಷ್ ವಿ ಶೆಟ್ಟಿ ಇನ್ನ ಕುರ್ಕಿಲ್ಬೆಟ್ಟು ಬಾಳಿಕೆ ಇವರು ಉದ್ಘಾಟಿಸಲಿರುವರು. ಹಾಗು ಮುಖ್ಯ ಅತಿಥಿಗಳಾಗಿ ಡಾ ಸುಜಯ್ ಹೆಗ್ಡೆ ಕ್ಯಾನ್ಸರ್ ತಜ್ಞರು ಆಗಮಿಸಲಿರುವರು. ಶ್ರೀ ಅಜಿತ್ ಹೆಗ್ಡೆ ಪ್ರಧಾನ ಕಾರ್ಯದರ್ಶಿಗಳು ಬಂಟರ ಸಂಘ ಪುಣೆ ಇವರಿಗೆ ಉತ್ತರ ಪ್ರಾದೇಶಿಕ ವಲಯದಿಂದ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ನಂತರ ಕ್ಯಾನ್ಸರ್ ಜನಜಾಗೃತಿಯ ಕುರಿತು ಡಾ ಸುಜಯ್ ಹೆಗ್ಡೆ ಇವರಿಂದ ಉಪನ್ಯಾಸ ನಡೆಯಲಿದೆ .
ಆದುದರಿಂದ ಸಾರ್ವಜನಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕಾಗಿ ಅಧ್ಯಕ್ಷರಾದ ಶ್ರೀ ನಾರಾಯಣ ಹೆಗ್ಡೆ , ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನ ಶೆಟ್ಟಿ, ಉತ್ತರ ಪ್ರಾದೇಶಿಕ ಸಮಿತಿಯ ಸಮನ್ವಯಾಧಿಕಾರಿ ಶ್ರೀ ಮಾಧವ್ ಆರ್ ಶೆಟ್ಟಿ . ಉಪಾದ್ಯಕ್ಷರುಗಳಾದ ಶ್ರೀ ವಸಂತ ಶೆಟ್ಟಿ , ಶ್ರೀ ಉದಯ್ ಶೆಟ್ಟಿ, ಮೆಡಿಕಲ್ ಚೇರ್ಮನ್ ಶ್ರೀ ಆನಂದ್ ವಿ ಶೆಟ್ಟಿ, ಖಜಾಂಚಿ ಸಂತೋಷ್ ಶೆಟ್ಟಿ , ಮಾಜಿ ಕಾರ್ಯಾಧ್ಯಕ್ಷರಾದ ಶ್ರೀ ಗಣೇಶ್ ಪೂಂಜಾ ,ಮಹಿಳಾ ವಿಭಾಗದ ಕಾರ್ಯಂತರರಾದ ಶ್ರೀಮತಿ ಪ್ರೇಮ ಆರ್ ಶೆಟ್ಟಿ ಹಾಗು ಎಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರು ಭಿನ್ನವಿಸಿಕೊಂಡಿದ್ದಾರೆ.
