ಪುಣೆ: ದೈಹಿಕ ಶಕ್ತಿ ಆರೋಗ್ಯಪೂರ್ಣ ಜೀವನಕ್ಕೆ ಕ್ರೀಡೆ ಒಂದು ರೀತಿಯಲ್ಲಿ ಉತ್ತಮ ವ್ಯಾಯಮ ಇದ್ದ ಹಾಗೆ. ಜಾತಿ ಧರ್ಮ ಎನ್ನದೆ ಬೇದ ಭಾವ ಇಲ್ಲದೆ ನಡೆಯುವ ಇಂತಹ ಕ್ರೀಡಾ ಆಯೋಜನೆಗಳು ದ್ವೇಷ ಭಾವ ವನ್ನು ಕೂಡಾ ದೂರ ಮಾಡುವ ವೇದಿಕೆ ಇದು. ಕ್ರೀಡೆಯ ಮೇಲಿನ ಪ್ರೀತಿ, ಆಸಕ್ತಿ ತೋರುವ ಮಕ್ಕಳು ಕಠಿನ ಪರಿಶ್ರಮದಿಂದ ಸಾಧನೆ ಮಾಡಬೇಕು .ಹೆಚ್ಚೆಚ್ಚು ಕ್ರೀಡಾ ಸ್ಪರ್ಧೆಗಳಲಿ ಬಾಗಿಗಳಾಗಬೇಕು. ತುಳುಕೂಟದ ರಜತ ಮಹೋತ್ಸವದ ಅಂಗವಾಗಿ ತುಳುಕೂಟದ ಎಲ್ಲಾ ಸದಸ್ಯರ ಸಹಕಾರದಿಂದ ತುಳುವರನ್ನು ಓಟ್ಟು ಸೇರೀಸಿಕೊಂಡು ಹೊಸ ರೂಪದಲ್ಲಿ ಪಂದ್ಯಾಟಗಳನ್ನು ಆಯೋಜಿಸಿದ್ದಾರೆ. ತುಳುವರಿಗಾಗಿ ಆಯೋಜನೆ ಮಾಡುವ ಕೂಟಗಳಲ್ಲಿ ಎಲ್ಲಾ ತುಳು ಭಾಂದವರು ಬಾಗಿಗಳಾಗಬೇಕು. ಇಲ್ಲಿ ಸೇರುವ ಎಲ್ಲರಲ್ಲಿಯೂ ಪರಸ್ಪರ ಪ್ರೀತಿಯ ಸಾಮರಸ್ಯ ಬೆಳೆಯಲು ಸಾದ್ಯ ಎಂದು ಪುಣೆ ಬಂಟ್ಸ್ ಅಸೋಸಿಯೇಷನ್ ನ ನಿಕಟ ಪೂರ್ವ ಅಧ್ಯಕ್ಷರಾದ ಗಣೇಶ್ ಹೆಗ್ಡೆ ಪುಣ್ಚೂರ್ ನುಡಿದರು .
ಪುಣೆ ತುಳುಕೂಟದ ರಜತ ಮಹೋತ್ಸವಕ್ಕೆ ಪೂರಕವಾಗಿ 25 ವಿವಿದ ಕಾರ್ಯಕ್ರಮಗಳು ನಡೆಯಯುತಿದ್ದು ಅದರ ಬಾಗವಾಗಿ ಸೆ 21ಮತ್ತು 22ರಂದು ತುಳುವರ ಗೊಬ್ಬು ಹೆಸರಿನಲ್ಲಿ ಫುಟ್ಬಾಲ್ ಮತ್ತು ಬಾಕ್ಸ್ ಕ್ರಿಕೆಟ್ ಪಂದ್ಯಾಟಗಳು ಗರ್ವಾರೆ ಕಾಲೇಜಿನ ಎದುರುಗಡೆ ಇರುವ ಸೆಂಟ್ರೋ ಮಾಲ್ ನ ಮೇಲ್ಮಮಹಡಿಯಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು .
21 ರಂದು ಬೆಳಗ್ಗೆ ಬಾಕ್ಸ್ ಪುಟ್ಬಾಲ್ ಪಂದ್ಯಾಟವನ್ನು ಅತಿಥಿಗಳಾಗಿ ಆಗಮಿಸಿದ ಪುಣೆ ಬಂಟ್ಸ್ ಅಸೋಸಿಯೇಷನ್ ನ ನಿಕಟ ಪೂರ್ವ ಅಧ್ಯಕ್ಷರಾದ ಗಣೇಶ್ ಹೆಗ್ಡೆ ಪುಣ್ಚೂರ್ ಮತ್ತು ದೇವಾಡಿಗ ಸಂಘದ ಅಧ್ಯಕ್ಷರಾದ ನಾರಾಯಣ ದೇವಾಡಿಗ ಉದ್ಘಾಟಿಸಿದರು .
ಈ ಸಂದರ್ಭದಲ್ಲಿ ತುಳುಕೂಟದ ಅಧ್ಯಕ್ಷರಾದ ದಿನೇಶ್ ಶೆಟ್ಟಿ ಕಳತ್ತೂರು, ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭಗಳಲ್ಲಿ, ರಜತ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರೋಹಿತ್ ಶೆಟ್ಟಿ ನಗ್ರಿ ಗುತ್ತು ,ತುಳುಕೂಟದ ಪ್ರಧಾನ ಕಾರ್ಯದರ್ಶಿ ರಾಜಾರಾಮ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಿಯಾ ಎಚ್ ದೇವಾಡಿಗ, ಗೌರವಾಧ್ಯಕ್ಷೆ ಸುಜತಾ ಶೆಟ್ಟಿ ಕ್ರೀಡಾ ಕಾರ್ಯಾಧ್ಯಕ್ಷ ನಾರಾಯಣ ಹೆಗ್ಡೆ, ಮಹಿಳಾ ಕ್ರೀಡಾ ಕಾರ್ಯಾಧ್ಯಕ್ಷೆ ರಂಜಿತಾ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಅಭಿಜಿತ್ ಶೆಟ್ಟಿ, ಶ್ರುತಿ ಜೆ .ಶೆಟ್ಟಿಮತ್ತು ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು .
ಅಂದು ಸಂಜೆ ನಡೆದ ಫೂಟ್ಬಾಲ್ ಪಂದ್ಯಾಟದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಕೋಶಾಧಿಕಾರಿ ದಿನೇಶ್ ಶೆಟ್ಟಿ ಉಜಿರೆ , ಉದ್ಯಮಿ ಸಮಾಜ ಸೇವಕ ಪ್ರಕಾಶ್ ಕರ್ಕೇರ ಉಪಸ್ಥಿತರಿದ್ದರು. ಅತಿಥಿ ಗಣ್ಯರನ್ನು ಪುಷ್ಪ ಗುಚ್ಛ ಸ್ಮರಣಿಕೆ ನೀಡಿ ಸತ್ಕರಿಸಲಾಯಿತು .
ಸೆ 22ರಂದು ನಡೆದ ಬಾಕ್ಸ್ ಕ್ರಿಕೆಟ್ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪುಣೆ ತುಳುಕೂಟದ ರಜತ ಮಹೋತ್ಸವ ಸಮಿತಿಯ ಉಪಾಧ್ಯಕ್ಷರಾದ ಸದಾಶಿವ ಸಾಲ್ಯಾನ್ , ಪುಣೆ ಬಂಟರ ಸಂಘದ ಯುವ ವಿಭಾಗದ ಕಾರ್ಯಾಧ್ಯಕ್ಷ ಉದಯ್ ಶೆಟ್ಟಿ .ಅರ್.ಡಿ .ಕನ್ಸ್ಟ್ರಕ್ಷನ್ ನ ಎಂ ಡಿ ದಯಾನಂದ ಸಪಲಿಗ ಆಗಮಿಸಿದ್ದರು. ವೇದಿಕೆಯಲ್ಲಿ ತುಳು ಕೂಟ ಮತ್ತು ರಜತ ಮಹೋತ್ಸವ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು. ಅತಿಥಿಗಳನ್ನು ಪುಷ್ಪಗುಚ್ಛ ಸ್ಮರಣಿಕೆ ನೀಡಿ ಗೌರವಿಸಲಾಯಿತು .ಸಂಜೆ ಪ್ರಶಸ್ತಿವಿತರಣಾ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಪುಣೆ ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷರಾದ ಪ್ರಭಾಕರ್ ಶೆಟ್ಟಿ ಯವರು ಉಪಸ್ಥಿತರಿದ್ದರು .
ಎರಡು ದಿನಗಳ ಕಾರ್ಯಕ್ರಮಗಳ ಸಮಯದಲ್ಲಿ ವಿವಿದ ಸಂಘ ಸಂಸ್ಥೆಗಳ ಗಣ್ಯರು ಅಗಮಿಸಿ ಶುಭ ಕೋರಿದರು ಇವರುಗಳನ್ನು ಪುಷ್ಪ ಗುಚ್ಛ ನೀಡಿ ಗೌರವಿಸಲಾಯಿತು . ರಜತ ಮಹೋತ್ಸವ ಸಮಿತಿಯ ಪ್ರದಾನ ಕಾರ್ಯದರ್ಶಿ ರೋಹಿತ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು . ವೇದಿಕೆಯಲ್ಲಿದ ಗಣ್ಯರು ಸಾಂದರ್ಭಿಕವಾಗಿ ಮಾತನಾಡಿದರು .
ತುಳುಕೂಟ ಕ್ರೀಡಾ ಮಹೋತ್ಸವಕ್ಕೆ ಪುಣೆಯ ತುಳು ಭಾಂದವರ ತಂಡಗಳು ಪಾಲ್ಗೊಂಡವು. ವಿಜೇತ ತಂಡಗಳಿಗೆ ನಗದು ಬಹುಮಾನ ಮತ್ತು ಟ್ರೋಪಿ ನೀಡಲಾಯಿತು ಕ್ರೀಡಾ ಕಾರ್ಯಾಧ್ಯಕ್ಷ ನಾರಾಯಣ ಹೆಗ್ಡೆ , ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ರಂಜಿತಾ ಶೆಟ್ಟಿ ಯುವ ವಿಭಾಗದ ಸಂಯೋಜಕರಾದ ಶ್ರೀ ಸುಮಿತ್ ಶೆಟ್ಟಿ , ಮತ್ತುಯುವ ಸಮಿತಿಯ ಪ್ರಮುಖರಾದ ಆಕಾಶ್ ಶೆಟ್ಟಿ , ನಿಕೆಶ್ ಶೆಟ್ಟಿ , ಭಾಗ್ಯೇಶ್ ಶೆಟ್ಟಿ , ಪ್ರತಿಕ್ ಶೆಟ್ಟಿ , ಪ್ರಮೇಶ್ ಶೆಟ್ಟಿ , ಅವಿನಾಶ್ ಶೆಟ್ಟಿ , ವಿಶ್ವರಾಜ್ ಶೆಟ್ಟಿ , ಹೃತಿಕ್ ಶೆಟ್ಟಿ ಹಿತೇಶ್ ಶೆಟ್ಟಿ , ಆಕಾಶ್ ಜಿ .ಶೆಟ್ಟಿ , ರುದ್ರೇಶ್ ಶೆಟ್ಟಿ , ಸುಚಿತ್ ಶೆಟ್ಟಿ , ಆದರ್ಶ್ ಶೆಟ್ಟಿ ಸಹಕಾರದೊಂದಿಗೆ ಪಂದ್ಯಾಟಗಳು ನಡೆದವು .
ತುಳುಕೂಟದ ಸಮಿತಿ ಮತ್ತು ರಜತ ಮಹೋತ್ಸವ ಸಮಿತಿಯ ಪದಾಧಿಕಾರಿಗಳಾದ ಉದಯ ಶೆಟ್ಟಿ ಕಳತ್ತೂರು ,ಸದಾನಂದ ನಾಯಕ್, ವಿಶ್ವನಾಥ್ ಪೂಜಾರಿ , ಆನಂದ್ ಶೆಟ್ಟಿ ಮಡಂತ್ಯಾರ್, ಯಶವಂತ್ ಶೆಟ್ಟಿಉಳಾಯಿಬೆಟ್ಟು, ಪ್ರಕಾಶ್ ಪೂಜಾರಿ ,ಸದಾನಂದ ಪೂಜಾರಿ ,ಮಹಾಬಲೇಶ್ವರ ದೇವಾಡಿಗ, ದಿವಾಕರ್ ಶೆಟ್ಟಿ ಮಾಣಿಬೆಟ್ಟು, ನವೀನ್ ಬಂಟ್ವಾಳ್, ಸಂತೋಷ್ ಶೆಟ್ಟಿ ಎಣ್ಣೆಹೊಳೆ, ಶರತ್ ಭಟ್, ಆನಂದ್ ಶೆಟ್ಟಿ ಚಾಂದಿನಿ, ಶಶಿಕಲಾ ಶೆಟ್ಟಿ , ಸುಕನ್ಯಾ ಶೆಟ್ಟಿ, ಪ್ರಮೋದ ಶೆಟ್ಟಿ ,ಶ್ವೇತಾ ಹೆಗ್ಡೆ , ಅಕ್ಷತಾ ಭಟ್ , ಶಕುಂತಲಾ ಶೆಟ್ಟಿ , ರಮಾ ಶೆಟ್ಟಿ, ಪ್ರೀತಿ ಶೆಟ್ಟಿ ಮತ್ತು ತುಳುಕೂಟದ ಪದಾದಿಕಾರಿಗಳು ರಜತ ಮಹೋತ್ಸವ ಸಮಿತಿಯ ಪದಾಧಿಕಾರಿಗಳು ಸಹಕರಿಸಿದರು . ರೋಹಿತ್ ಶೆಟ್ಟಿ ನಗ್ರಿ ಗುತ್ತು , ಉದಯ್ ಶೆಟ್ಟಿ ಕಳತ್ತೂರು , ಪ್ರಿಯಾ ದೇವಾಡಿಗ , ಸಂತೋಷ್ ಶೆಟ್ಟಿ ಎಣ್ಣೆಹೊಳೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು .

ಕ್ರೀಡಾ ಸ್ಪೂರ್ತಿಯೊಂದಿಗೆ ನ್ಯಾಯಯುತವಾಗಿ ಕ್ರೀಡಾ ಸ್ಪರ್ದೆಗಳು ನಡೆದಾಗ ಆಟಗಾರರಿಗೆ ಮತ್ತು ಸ್ಪರ್ದಿಗಳಿಗೆ ಸೌಜನ್ಯ , ನೈತಿಕ ನಡವಳಿಕೆ ಮತ್ತು ಸಮಗ್ರತೆಯೊಂದಿಗೆ ಸೋಲು ಮತ್ತು ಗೆಲುವನ್ನುಸಮಾನಾಂತರವಾಗಿ ಸ್ವೀಕರಿಸುವ ಮನೋಬಲ ದೊರೆಯುತ್ತದೆ . ಇದರಿಂದ ಕ್ರೀಡಾಸಕ್ತರಲ್ಲಿ ಆಕಾಂಕ್ಷೆಗಳು ಮತ್ತಷ್ಟು ಚಿಗುರಿಕೊಂಡು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸ್ಪೂರ್ತಿಯನ್ನು ನೀಡುತ್ತದೆ . ಯಾವುದೇ ಸ್ಪರ್ದಿ ಸೋಲು ಗೆಲುವಿಗಾಗಿ ಅಸೆ ಪಡದೆ ತಾನು ಕ್ರೀಡೆಯಲ್ಲಿ ಪಾಲು ಪಡೆದು ಹೇಗೆ ಆಡಿದ್ದೇನೆ ಎಂಬುದು ಮುಖ್ಯವಾಗಬೇಕು . ತುಳುಕೂಟದ ರಜತ ಮಹೋತ್ಸವಕ್ಕೆ ನನ್ನ ಸಂಪೂರ್ಣ ಸಹಕಾರವಿದೆ – ಶ್ರೀ ದಿನೇಶ್ ಶೆಟ್ಟಿ ಉಜಿರೆ -ಕೋಶಾಧಿಕಾರಿ ಬಂಟರ ಸಂಘ ಪಿಂಪ್ರಿ ಚಿಂಚ್ವಾಡ್
ಪಂದ್ಯಾಟಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತುಳು ಭಾಂದವರು ಪಾಲ್ಗೊಂಡು ಕ್ರೀಡಾ ಸ್ಪೂರ್ತಿಯಿಂದ ಪಾಲು ಪಡೆದು ಕ್ರೀಡಾಭಿಮಾನವನ್ನು ತೋರಿಸುವ ಮೂಲಕ ಯಶಸ್ವಿಗೊಳಿಸುವಲ್ಲಿ ಸಹಕಾರ ನೀಡುತ್ತಾರೆ .ಸಂಘ ಅಥವಾ ಸಂಘಟನೆ ಮತ್ತಷ್ಟು ಸದೃಡವಾಗಲು ಇಂತಹ ಕೂಟಗಳು ಸಹಕಾರಿಯಾಗುತ್ತದೆ – ಶ್ರೀ ಸದಾಶಿವ ಸಾಲ್ಯಾನ್ ಉಪಾಧ್ಯಕ್ಷರು ರಜತ ಮಹೋತ್ಸವ ಸಮಿತಿ ತುಳುಕೂಟ ಪುಣೆ
ಇಲ್ಲಿ ಹೊಸ ಹೊಸ ಪರಿಚಯ ತುಳುವರ ಕೂಡುವಿಕೆಯಿಂದ ನಮ್ಮ ಸ್ನೇಹ ಸಂಬಂದಗಳು ಬೆಳೆಯುದರ ಮೂಲಕ ಭಾವನೆಗಳನ್ನು ಹಂಚಿಕೊಳ್ಳಲು ಸಹಕಾರಿಯಾಗುತ್ತದೆ , ರಜತ ಮಹೋತ್ಸವ ವಿಜ್ರಂಭಣೆಯಿಂದ ನಡೆಯಲಿ –
ಶ್ರೀ ನಾರಾಯಣ ದೇವಾಡಿಗ – ಅಧ್ಯಕ್ಷರು ದೇವಾಡಿಗ ಸಂಘ ಪುಣೆ
ರಚನಾತ್ಮಕ ಸಂಭಂದಗಳನ್ನು ಸೇರಿಸಿಕೊಂಡು ಪರಸ್ಪರ ವ್ಯಕ್ತಿಗತ ಪರಿಚಯ ಮತ್ತು ಸಂಭಂದಗಳನ್ನು ಗಟ್ಟಿಗೊಳಿಸುವಲ್ಲಿ ಸಂಘ ಸಂಸ್ಥೆಗಳ ಮಹತ್ವ ಬಹಳಷ್ಟಿದೆ , ಇದಕ್ಕೆ ಸಂಬಂದಪಟ್ಟಂತೆ ತುಳುವರ ಸಂಸ್ಥೆ ಪುಣೆ ತುಳುಕೂಟ ಮಾದರಿಯಾಗಿ ಕೆಲಸ ಮಾಡುತಿದೆ –ಶ್ರೀ ಉದಯ್ ಶೆಟ್ಟಿ ಕಾರ್ಯಾಧ್ಯಕ್ಷರು ಯುವ ವಿಭಾಗ ಬಂಟರ ಸಂಘ ಪುಣೆ
ಕ್ರೀಡಾಭಿಮಾನ ಮತ್ತು ಸಾಧನೆ ಮಾಡುವ ಛಲ ಕ್ರೀಡಾಪಟುಗಳಲ್ಲಿ ಇರಬೇಕು , ಅವಕಾಶ ಸಿಕ್ಕಾಗ ಉಪಯೋಗಿಸಿಕೊಂಡು ತಮ್ಮ ಪ್ರತಿಭೆ ತೋರಿಸುವ ಹುಮ್ಮಸ್ಸು ಇರಲಿ. ಪುಣೆ ತುಳುಕೂಟದ ಮೂಲಕ ಹಲವಾರು ಪ್ರತಿಭೆಗಳು ಇಲ್ಲಿ ಇದ್ದಾರೆ , ರಜತ ಮಹೋತ್ಸವಕ್ಕೆ ಶುಭ ಹಾರೈಕೆಗಳು –ಶ್ರೀ ಗಣೇಶ್ ಪೂಂಜಾ –ಮಾಜಿ ಕಾರ್ಯಾಧ್ಯಕ್ಷರು ಉತ್ತರ ಪ್ರಾದೇಶಿಕ ಸಮಿತಿ ಬಂಟರ ಸಂಘ ಪುಣೆ
ಪುಣೆ ತುಳುಕೂಟದ ಮೂಲಕ ತುಳುವರಿಗಾಗಿ ನಡೆಯುವ ಪಂದ್ಯಾಟಗಳಿಂದ ತುಳುವರ ಸಂಘಟನಾ ಸಾಮರ್ಥ್ಯಕ್ಕೆ ಬಲ ಸಿಗುತ್ತದೆ
ಶ್ರೀ ದಯಾನಂದ ಸಪಲಿಗ -ಅರ್ .ಡಿ . ಕನ್ಸ್ಟ್ರಕ್ಷನ್ ಪುಣೆ
ಪುಣೆ ತುಳುವರಿಗಾಗಿ ಇರುವ ಪುಣೆ ತುಳುಕೂಟದ ಮೂಲಕ ಭಾಂದವ್ಯ ಬೆಸೆಯುವ ಕಾರ್ಯ ಆಗುತಿದೆ . ಉತ್ತಮ ಕಾರ್ಯ ಕ್ರಮಗಳಿಗೆ ನಮ್ಮ ಸಂಪೂರ್ಣ ಸಹಕಾರ ಸದಾ ಇದೆ –ಶ್ರೀ ಪ್ರಕಾಶ್ ಕರ್ಕೇರ ಉದ್ಯಮಿ ಪುಣೆ
ನಮ್ಮ ತುಳುಕೂಟದ ಪ್ರತಿಯೊಂದು ವಿಭಾಗದವರ ವಿವಿದ ರೀತಿಯ ಕಾರ್ಯಕ್ರಮಗಳು ರಜತ ಮಹೋತ್ಸವಕ್ಕೆ ಪೂರಕವಾಗಿ ನಡೆಯುತಿವೆ , ಕ್ರೀಡಾ ಕಾರ್ಯಾಧ್ಯಕ್ಷ ನಾರಾಯಣ ಹೆಗ್ಡೆ ಮತ್ತು ಸಮಿತಿಹಾಗೂ ಯುವ ವಿಭಾಗದವರ ಸೇರಿಕೊಂಡು ಉತ್ತಮ ಯೋಜನೆಯಲ್ಲಿ ಈ ಪಂದ್ಯಾಟಗಳು ಆಯೋಜನೆ ಆಗಿದೆ .ಮುಂದೆ ಬ್ಯಾಡ್ಮಿಂಟನ್ ಮತ್ತುಮೇಘಾ ಕ್ರೀಡಾಕೂಟ ನಡೆಯಲಿದೆ , ಮತ್ತುದಸರಾ ಪೂಜೆ ಹಾಗೂ ರಜತ ಸಂಭ್ರಮ ನಡೆಯಲಿದೆ ತಮ್ಮೆಲ್ಲರ ಸಹಕಾರ ಇರಲಿ ಶ್ರೀ ದಿನೇಶ್ ಶೆಟ್ಟಿ ಕಳತ್ತೂರು , ಅಧ್ಯಕ್ಷರು ತುಳುಕೂಟ ಪುಣೆ
ತುಳುಕೂಟದ ರಜತ ಮಹೋತ್ಸವ ಎಂದರೆ ಪುಣೆ ತುಳುವರ ಉತ್ಸವ ಆಗಬೇಕು , ಹೊಸ ಹೊಸ ರೀತಿಯಲ್ಲಿ ಬೇರೆ ಬೇರೆ ಕಾರ್ಯಕ್ರಮಗಳನ್ನು ಆಯೋಜಿಸುತಿದ್ದೇವೆ , ಪುಣೆಯ ತುಳುವರೆಲ್ಲರು ಈ ಕಾರ್ಯಕ್ರಮಗಳಲ್ಲ್ಲಿ ಬಾಗಿಗಳಾಗಬೇಕು ಎಂಬುದೇ ನಮ್ಮ ಉದ್ದೇಶ ಹಿಂದಿನ ಹಲವಾರು ಕಾರ್ಯಕ್ರಮಗಳಲ್ಲಿ ತುಳುವರು ಪಾಲ್ಗೊಂಡಿದ್ದಾರೆ . ಮುಂದೆ ಕೂಡಾ ಕಾರ್ಯಕ್ರಮಗಳು ನಡೆಯಲಿದೆ ಮತ್ತು ರಜತ ಮಹಾ ಸಂಭ್ರಮ ಜರಗಲಿದೆ –ತಮ್ಮೆಲ್ಲರ ಸಹಕಾರ ನಮ್ಮೊಂದಿಗಿರಲಿ –ಶ್ರೀ ಪ್ರವೀಣ್ ಶೆಟ್ಟಿ ಪುತ್ತೂರು ಅಧ್ಯಕ್ಷರು ರಜತ ಮಹೋತ್ಸವ ಸಮಿತಿ ತುಳುಕೂಟ ಪುಣೆ .
ರಜತ ಮಹೋತ್ಸವಕ್ಕೆ ನಮ್ಮ ತುಳುನಾಡಿನ ಆಟೋಟ ಸ್ಪರ್ಧೆಗಳನ್ನು ಆಯೋಜಿಸುವ ಯೋಜನೆಯಂತೆ ಪಂದ್ಯಾಟಗಳನ್ನು ಆಯೋಜಿಸಿದ್ದೇವೆ , ನಮ್ಮ ತುಳುವರು ಮಕ್ಕಳು ಯುವಕರು ಮಹಿಳೆಯರು ಪುರುಷರು ಹಿರಿಯರು ಸೇರಿದಂತೆ ಎಲ್ಲರು ಪಾಲ್ಗೊಳ್ಳಬೇಕು ,29ರಂದು ಬ್ಯಾಡ್ಮಿಂಟನ್ ಸ್ಪರ್ದೆ , ಅ 13ರಂದು ಮೇಘಾ ಸ್ಪೋರ್ಟ್ಸ್ ನಡೆಯಲಿದೆ ಇದರಲ್ಲಿ ನಮ್ಮ ತುಳುನಾಡ ಹಳ್ಳಿ ಆಟಗಳು ಕೂಡಾ ಇರಲಿದೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿ – ಶ್ರೀ ನಾರಾಯಣ ಹೆಗ್ಡೆ –ಕ್ರೀಡಾ ಕಾರ್ಯಾಧ್ಯಕ್ಷ ತುಳು ಕೂಟ ಪುಣೆ

ವರದಿ ಹರೀಶ್ ಮೂಡಬಿದ್ರಿ ಪುಣೆ