ಪುಣೆ : ಪುಣೆ ತುಳುವರ ಪ್ರತಿಷ್ಠೆಯ ಬಂಟರ ಭವನ ಬಹಳಷ್ಟು ತುಳು ಕನ್ನಡಿಗರ ಶಕ್ತಿಕೇಂದ್ರ. ಇಲ್ಲಿನ ಛಾವಡಿ ನಮಗರಿವಿಲ್ಲದಂತೆ ನಮ್ಮಲ್ಲಿ ಭಕ್ತಿ ಭಾವಗಳನ್ನು ತುಂಬಿಸುವಂತಹ ಸೆಳೆತವನ್ನು ಹೊಂದಿದೆ. ವಿಶ್ವದ ಬಂಟರ ಭವನಗಳ ಸಾಲಿನಲ್ಲಿ ಪುಣೆ ಬಂಟರ ಭವನ ಅತ್ಯಂತ ಪ್ರಸಿದ್ಧಿ ಪಡೆದಿರುವುದು ನಮ್ಮ ಹೆಮ್ಮೆ . ಇದೆಲ್ಲವೂ ಮಹಾ ದಾನಿಗಳ ನಿಸ್ವಾರ್ಥ ಸೇವೆಯಿಂದ ಸಿದ್ದಿಯಾಗಿದೆ. ನಾನು ಅದರ ಸೇವಕ ,ದಾನಿಗಳೇ ದೇವರಾಗಿ ,ಹಿರಿಯರೇ ಗುರುಗಳಾಗಿ ,ಮಹಿಳೆಯರೇ ಶಕ್ತಿಗಳಾಗಿ, ಅಕ್ಕ ತಂಗಿಯರ , ಅಣ್ಣ ತಮ್ಮಂದಿರ ಸಾರ್ಥಕ ಸೇವೆಯೊಂದಿಗೆ ನಾವಿಂದು ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದೇವೆ . ‘ಅಳಿಯುವುದು ಕಾಯ ಉಳಿಯುವುದು ಕಾರ್ಯ’ ಎಂಬಂತೆ ಈ ಭವನಕ್ಕಾಗಿ ರಚನಾತ್ಮಕವಾಗಿ, ಸಮಾಜಮುಖಿಯಾದ ಸೇವಾ ಕಾರ್ಯ ಮಾಡಿದ ಎಲ್ಲರ ನೆನಪು ಶಾಶ್ವತವಾಗಿ ಉಳಿಯಲಿದೆ . ನಾಯಕತ್ವ ಮತ್ತು ಎಲ್ಲರ ಸೇವಾ ಕಾರ್ಯದಿಂದ ಸಂಘವು ಮಾದರಿಯಾಗಿ ಗುರುತಿಸಿಕೊಂಡಿದೆ . ಸಂಘದ ಕಲ್ಪವೃಕ್ಷ ಯೋಜನೆಗಳಿಗೆ ಮನಸಾರೆ ದಾನ ಮಾಡಿದ ಎಲ್ಲರ ಸೇವೆಯನ್ನುಸ್ಮರಿಸುತ್ತೇವೆ . ನಮ್ಮ ಸಂಘದ 50 ವರ್ಷಗಳ ಸಂಭ್ರಮ ಹಲವಾರು ಕಾರ್ಯಕ್ರಮಗಳ ಮೂಲಕ ನಡೆಯುತಿದ್ದು ನವೆಂಬರ್ 30 ರಂದು ಮಹಾ ಸಂಭ್ರಮ ನಡೆಯಲಿದೆ. ಈ ದಿನವನ್ನು ಈಗಲೇ ಮೀಸಲಿಟ್ಟು ಸಮಾಜ ಭಾಂದವರೆಲ್ಲರೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು .ತನುಮನಧನದ ಸಹಕಾರದೊಂದಿಗೆ ನಮ್ಮ ಕಾರ್ಯ ಯೋಜನೆಗಳೊಂದಿಗೆ ಸೇರಿಕೊಳ್ಳಬೇಕು . ಸುವರ್ಣ ಮಹೋತ್ಸವದ ಐತಿಹಾಸಿಕ ಸಂಭ್ರಮಕ್ಕೆ ನಾವೆಲ್ಲರೂ ಸಾಕ್ಷಿಗಳಾಗೋಣ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ನುಡಿದರು .

ಪುಣೆ ಬಂಟರ ಸಂಘದ ಸುವರ್ಣ ಮಹೋತ್ಸವ ಸಮಿತಿಯ ಸಭೆಯು ಸೆ 12ರಂದು ಕೋರೋನೆಟ್ ಹೋಟೆಲ್ ನ ಬ್ಯಾಂಕ್ವೇಟ್ ಹಾಲ್ ನಲ್ಲಿ ಸಂತೋಷ್ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ಜರಗಿತು .ಸಭೆಯಲ್ಲಿ ಸಂಘದ ಪದಾಧಿಕಾರಿಗಳಾದ ಅಜಿತ್ ಹೆಗ್ಡೆ ,ಮೋಹನ್ ಶೆಟ್ಟಿ ,ಗಣೇಶ್ ಶೆಟ್ಟಿ ,ವೈ ಚಂದ್ರಹಾಸ್ ಶೆಟ್ಟಿ ,ಗಣೇಶ್ ಹೆಗ್ಡೆ ಪುಣ್ಚೂರು, ರಾಮಕೃಷ್ಣ ಶೆಟ್ಟಿ ,ಸುಧೀರ್ ಶೆಟ್ಟಿ ಕಣಂಜಾರು ,ಕಿಶೋರ್ ಹೆಗ್ಡೆ ,ಪ್ರಶಾಂತ್ ಶೆಟ್ಟಿಹೆರ್ಡೆಬೀಡು ,ಚಂದ್ರಶೇಖರ್ ಶೆಟ್ಟಿ ನಿಟ್ಟೆ , ವಿವೇಕಾನಂದ ಶೆಟ್ಟಿ ಅವರ್ಸೆ ,ತಾರಾನಾಥ್ ರೈ ಮೇಗಿನ ಗುತ್ತು ,ಉದಯ್ ಶೆಟ್ಟಿ ,ಶೇಖರ್ ಶೆಟ್ಟಿ ,ನಾರಾಯಣ ಹೆಗ್ಡೆ ,ಸುನಿಲ್ ಶೆಟ್ಟಿ ,ಶಮ್ಮಿ ಎ .ಹೆಗ್ಡೆ ,ದಿವ್ಯಾ ಎಸ್ ಶೆಟ್ಟಿ ,ವೀಣಾ ಶೆಟ್ಟಿ ,ನಯನ ಜೆ ,ಶೆಟ್ಟಿ ,ಯಶೋದ ಜೆ ಶೆಟ್ಟಿ ,ಶ್ರಾವ್ಯ ಎಸ್ .ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು . ಅಲ್ಲದೆ ಕಾರ್ಯಕ್ರಮ ನಿರೂಪಕರಾದ ಮೋಹನ್ ರೈ ಕರ್ನೂರು ಮತ್ತು ಅಶೋಕ್ ಪಕ್ಕಳ ಉಪಸ್ಥಿತರಿದ್ದರು .
ಸಭೆಯಲ್ಲಿ ಸುವರ್ಣ ಮಹೋತ್ಸವ ಶಿಸ್ತು ಬದ್ದವಾಗಿ ನಡೆಸಲು ಜವಾಬ್ದಾರಿಯುತವಾದ ನಾಯಕತ್ವದೊಂದಿಗೆ ಸಮಿತಿಗಳ ರಚನೆ, ಕಾರ್ಯಕ್ರಮಗಳ ರೂಪುರೇಷೆ , ಮತ್ತು ವಿವಿದ ಸಮಿತಿಗಳ ಮೇಲ್ವಿಚಾರಣೆಯೊಂದಿಗೆ ತಯಾರಿಯ ಬಗ್ಗೆ ಚರ್ಚಿಸಲಾಯಿತು . ಸಭೆಯಲ್ಲಿದ್ದ ಸದಸ್ಯರು ಸಲಹೆ ಸೂಚನೆಗಳನ್ನು ನೀಡಿದರು .ಮೋಹನ್ ರೈ ಮತ್ತು ಅಶೋಕ ಪಕ್ಕಳ ಮಾತನಾಡಿದರು . ಕಾರ್ಯದರ್ಶಿಗಳಾದ ಶ್ರೀ ಅಜಿತ್ ಹೆಗ್ಡೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು .
ವಿಶ್ವದ ಬಂಟರ ಸಂಘಗಳಲ್ಲಿ ಪುಣೆ ಬಂಟರ ಸಂಘ ಮಾದರಿಯಾಗಿ ಗುರುತಿಸಿಕೊಂಡಂತಹ ಒಂದು ಸಂಘ ಎಂದು ಹೇಳಲು ತುಂಬಾ ಹೆಮ್ಮೆ ಎನಿಸುತಿದೆ. ಅಧ್ಯಕ್ಷರ ಸಂಘಟನಾ ಚಾತುರ್ಯ ಮತ್ತು ಸಮಿತಿಯ ಎಲ್ಲರ ಶ್ರಮ ಬಹಳಷ್ಟು ಇಲ್ಲಿದೆ .ಸುವರ್ಣ ಮಹೋತ್ಸವ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುವುದು ಎಲ್ಲರ ಜವಾಬ್ದಾರಿಯಾಗಿದೆ. ನಾವು ಇಲ್ಲಿಯ ಸದಸ್ಯರಾಗಿಯೇ ಇದ್ದೇವೆ. ಸುವರ್ಣ ಮಹೋತ್ಸವ ಆಚರಣೆಗೆ ನಾವು ಕೂಡಾ ನಿಮ್ಮೊಂದಿಗಿದ್ದೇವೆ
– ಮೋಹನ್ ರೈ ಕರ್ನೂರು ಮುಂಬಯಿ
ಇಂತಹ ಬಂಟರ ಭವನ ಪುಣೆ ಬಂಟರಿಗೆ ಸಿಕ್ಕಿದೆ ಎಂದರೆ ಅದೊಂದು ನಿಮ್ಮೆಲ್ಲರ ಭಾಗ್ಯ ,ನಮಗೂ ಮತ್ತು ಎಲ್ಲರಿಗೂ ಮಾದರಿಯಾದ ಸಂಘ ,ಇಲ್ಲಿಯ ನಾಯಕತ್ವ ಮೆಚ್ಚುವಂತಹದು ,ಭಾಂದವರ ಸಹಕಾರ ಕೂಡಾ ಅಷ್ಟೇ ಮಟ್ಟದಲ್ಲಿ ಸಿಗುತಿದೆ. ಇದರಿಂದ ಇಲ್ಲಿಯ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತಿವೆ . ,ಭವನ ಸಂಘಕ್ಕೆ ಆದಾಯದ ಮೂಲವಾಗಿ ಮತ್ತಷ್ಟು ಬಲಿಷ್ಠ ಗೊಳ್ಳುವಲ್ಲಿ ಸಹಕಾರಿಯಾಗಿದೆ ಸುವರ್ಣ ಮಹೋತ್ಸವ ಮಾದರಿಯಾಗಿ ನಡೆಯಲಿ ಎಂದು ಶುಭ ಹಾರೈಸುತ್ತೇನೆ
– ಶ್ರೀ ಅಶೋಕ್ ಪಕ್ಕಳ ಮುಂಬಯಿ
