ಪುಣೆ : ಮುಂಬೈ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಅತ್ಯಂತ ಸುಂದರ ವಿನ್ಯಾಸದ ‘ಪುಣೆ ಬಂಟರ ಭವನ’ ದಲ್ಲಿ ಪ್ರತಿಷ್ಠಿತ ಬಂಟರ ಸಂಘ ಪುಣೆ ಯ ಸುವರ್ಣ ಮಹೋತ್ಸವದ ಸಿದ್ಧತೆ ಭರದಿಂದ ಸಾಗುತ್ತಿದೆ. ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಬಂಟರ ಸಂಘವು ‘ಶ್ರೀನಿವಾಸ ಕಲ್ಯಾಣೋತ್ಸ’ವದ ಮೂಲಕ ಪ್ರಾರಂಭಗೊಂಡು ನವೆಂಬರ್ 30 ರಂದು ನಡೆಯಲಿರುವ ಸುವರ್ಣ ಮಹೋತ್ಸವ ಮಹಾ ಸಂಭ್ರಮ ಮತ್ತು ಅದಕ್ಕೆ ಪೂರಕವಾಗಿ ನಡೆಯಲಿರುವ ಕಾರ್ಯಕ್ರಮಗಳನ್ನು ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಮತ್ತು ಸಮಿತಿಯ ಎಲ್ಲಾ ಪದಾಧಿಕಾರಿಗಳ ಸಂಕಲ್ಪದಂತೆ ಅದ್ದೂರಿಯಾಗಿ ಜನಪರ ಸೇವೆಯೊಂದಿಗೆ, ಅರ್ಥ ಪೂರ್ಣವಾಗಿ ಆಚರಿಸುವುದಾಗಿ ತೀರ್ಮಾನಿಸಲಾಗಿದೆ.






ಇದಕ್ಕಾಗಿ ಸುವರ್ಣ ಮಹೋತ್ಸವ ಸಮಿತಿಯನ್ನು ರಚಿಸಿ ಅ ಮೂಲಕ ಕಾರ್ಯಕ್ರಮಗಳು ನಡೆಯಲಿವೆ. ಸುವರ್ಣ ಮಹೊತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಖ್ಯಾತ ಕೈಗಾರಿಕೊದ್ಯಮಿ , ಪುಣೆ ಕನ್ನಡ ಸಂಘದ ಅಧ್ಯಕ್ಷರಾದ , ಮಹಾದಾನಿ ಸಂಘದ ಮಾಜಿ ಅಧ್ಯಕ್ಷರಾದ ‘ಕಣಂಜಾರು ಪಟ್ಟದ ಮನೆ ಕುಶಲ್ ಹೆಗ್ಡೆ’ಯವರನ್ನು ಆಯ್ಕೆ ಮಾಡಲಾಗಿದೆ. ಕಾರ್ಯಾಧ್ಯಕ್ಷರನ್ನಾಗಿ ಪ್ರಸಿದ್ದ ಹೋಟೆಲ್ ಉದ್ಯಮಿ,ಸಮಾಜ ಸೇವಕ, ಪುಣೆ ಬಂಟರ ಸಂಘದ ಬೆನ್ನೆಲುಬು , ಮಾಜಿ ಉಪಾಧ್ಯಕ್ಷರಾದ ವಿಶ್ವನಾಥ್ ಶೆಟ್ಟಿಯವರು ಆಯ್ಕೆ ಮಾಡಲಾಗಿದೆ. ದಿವಂಗತ ಓಣಿ ಮಜಲು ಜಗನ್ನಾಥ್ ಶೆಟ್ಟಿಯವರ ಸಹೋದರ ಸೊಸೆ, ಬಂಟರ ಸಂಘದ ಮಹಿಳಾ ವಿಭಾಗದ ಮಾಜಿ ಕಾರ್ಯಧ್ಯಕ್ಷೆಯಾದ ಜಯಂತಿ ಜಯಾನಂದ ಶೆಟ್ಟಿಯವರನ್ನು ಮಹಿಳಾ ವಿಭಾಗದ ಗೌರವಾಧ್ಯಕ್ಷೆಯನ್ನಾಗಿ ಹಾಗೂ ಬಂಟರ ಸಂಘದ ನಿರ್ಮಾತೃ ,ಖ್ಯಾತ ಉದ್ಯಮಿ ದಿವಂಗತ ಗುಂಡುರಾಜ್ ಶೆಟ್ಟಿಯವರ ಸೊಸೆ, ಬಂಟರ ಸಂಘದ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆಯಾದ ಶ್ರೀಮತಿ ದೇವಿಕಾ ಯು .ಶೆಟ್ಟಿಯವರನ್ನು ಕಾರ್ಯಾಧ್ಯಕ್ಷೆಯಾಗಿ ಆಯ್ಕೆ ಮಾಡಲಾಯಿತು. ಮತ್ತು ಸಂಘದ ಮಹಿಳಾ ಕಾರ್ಯಧ್ಯಕ್ಷೆ ಸುಲತಾ ಎಸ್ .ಶೆಟ್ಟಿಯವರು ಸೇರಿಕೊಂಡಂತೆ ಸಮಿತಿ ರಚನೆ ಮಾಡಲಾಗಿದೆ, ಸಮಿತಿಯ ಸಲಹೆಗಾರರುಗಳಾಗಿ ಮಾಜಿ ಅಧ್ಯಕ್ಷರುಗಳಾದ ಡಾ .ಮೇಜರ್ ಜನರಲ್ ಜಯಕರ್ ಶೆಟ್ಟಿ , ಸುಬ್ಬಣ್ಣ ಶೆಟ್ಟಿ , ಸಿ ಎ ಸದಾನಂದ ಶೆಟ್ಟಿ ,ಜಯಂತ್ ಶೆಟ್ಟಿ ,ಸದಾನಂದ ಕೆ ಶೆಟ್ಟಿ , ಕಾರ್ಯಾಧ್ಯಕ್ಷೆಯರುಗಳಾದ ಶ್ರೀಮತಿಯರಾದ ಶೋಭಾ ಜೆ ಶೆಟ್ಟಿ ,ಶಶಿ ಬಿ .ಹೆಗ್ಡೆ ,ಇಂದಿರಾ ಎಸ್ .ಶೆಟ್ಟಿ , ಸಂದ್ಯಾ ವಿ .ಶೆಟ್ಟಿ ,ಟ್ರಸ್ಟಿಗಳಾದ ಪುಷ್ಪ ಕುಶಲ್ ಹೆಗ್ಡೆ , ಸೋಮನಾಥ್ ಶೆಟ್ಟಿ , ದಯಾ ಶಂಕರ್ ಶೆಟ್ಟಿ ,ಯಶೋದಾ ಗುಂಡುರಾಜ್ ಶೆಟ್ಟಿ ,ರತ್ನಾ ಶ್ರೀದರ್ ಶೆಟ್ಟಿ , ಚಂದ್ರಕಲಾ ಗೋವರ್ಧನ್ ಶೆಟ್ಟಿ ,ಕರುಣಾಕರ್ ಶೆಟ್ಟಿ ಸಮುದ್ರ ,ಕಿರಣ್ ಹೆಗ್ಡೆ , ಜೀತೇಂದ್ರ ಹೆಗ್ಡೆ , ಸದಾನಂದ ಶೆಟ್ಟಿ ಮಂಗಳವಾರ ಪೇಟ್,ಸತೀಶ್ ರೈ ಕಲ್ಲಂಗಳ ಗುತ್ತು , ನಾಗೇಶ್ ಎನ್ .ಶೆಟ್ಟಿ , ಶ್ರೀಮತಿ ನಿವೇದಿತಾ ಸುದಾಕರ್ .ಶೆಟ್ಟಿ , ಗೀತಾ ಜಯ ಶೆಟ್ಟಿ , ಮಿಸ್ ಪೂಜಾ ಸೀತಾರಾಮ ಶೆಟ್ಟಿ, ನಿಕಿತಾ ಜಗನ್ನಾಥ್ ಶೆಟ್ಟಿ ಇವರನ್ನು ಆಯ್ಕೆ ಮಾಡಲಾಗಿದೆ .
ಸುವರ್ಣ ಮಹೋತ್ಸವವನ್ನು ಅಚ್ಚು ಕಟ್ಟಾಗಿ ಶಿಸ್ತು ಬದ್ದವಾಗಿ ಆಚರಿಸುವ ನಿಟ್ಟಿನಲ್ಲಿ ವಿವಿದ ಸಮಿತಿಗಳನ್ನು ರಚಿಸಲಾಗಿದ್ದು , ಎಲ್ಲಾ ಸಮಿತಿಗಳ ಸಂಯೋಜಕ ಸಮಿತಿ ಕಾರ್ಯಾಧ್ಯಕ್ಷರುಗಳಾಗಿ ಸತೀಶ್ ಶೆಟ್ಟಿ ಮತ್ತು ಸುಧೀರ್ ಶೆಟ್ಟಿ ಕಣಂಜಾರು ಕೊಳಕೆ ಬೈಲು, ನಿಧಿ ಸಂಗ್ರಹ ಸಮಿತಿ ಕಾರ್ಯಾಧ್ಯಕ್ಷರುಗಳಾಗಿ ಅಜಿತ್ ಹೆಗ್ಡೆ ಮತ್ತು ಪ್ರವೀಣ್ ಶೆಟ್ಟಿ ಪುತ್ತೂರು, ಸ್ವಾಗತ ಸಮಿತಿಯ ಕಾರ್ಯಧ್ಯಕ್ಷರುಗಳಾಗಿ ಗಣೇಶ್ ಶೆಟ್ಟಿ,ಮೋಹನ್ ಶೆಟ್ಟಿ, ವೈ.ಬಾಲಚಂದ್ರ ಶೆಟ್ಟಿ, ಪ್ರಭಾಕರ ಶೆಟ್ಟಿ. ಅತಿಥಿ ಸಮನ್ವಯಕ ಸಮಿತಿಗೆ ಕಾರ್ಯಾಧ್ಯಕ್ಷರುಗಳಾಗಿ ಗಣೇಶ ಹೆಗ್ಡೆ, ರಾಮಕೃಷ್ಣ ಶೆಟ್ಟಿ. ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷರುಗಳಾಗಿ ವೈ ಚಂದ್ರಹಾಸ ಶೆಟ್ಟಿ, ವಿವೇಕ್ ಶೆಟ್ಟಿ, ಆಡಿಟೋರಿಯಂ ನಿರ್ವಹಣಾ ಸಮಿತಿ ಕಾರ್ಯಧ್ಯಕ್ಷರುಗಳಾಗಿ ಮಾಧವ್ ಆರ್ ಶೆಟ್ಟಿ,ಶೇಖರ್ ಸಿ.ಶೆಟ್ಟಿ, ಸಾಂಸ್ಕೃತಿಕ ಸಮಿತಿ ಕಾರ್ಯಧ್ಯಕ್ಷರುಗಳಾಗಿ , ವೈ ಚಂದ್ರಹಾಸ ಶೆಟ್ಟಿ, ತಾರನಾಥ ರೈ ಮೇಗಿನ ಗುತ್ತು , ಮಾಧ್ಯಮ ಸಂವಹನ ಮತ್ತು ಪ್ರಚಾರ ಸಮಿತಿ ಕಾರ್ಯಧ್ಯಕ್ಷರುಗಳಾಗಿ ಕಿಶೋರ ಹೆಗ್ಡೆ ,ಸುನಿಲ್ ಶೆಟ್ಟಿ , ಸ್ಮರಣ ಸಂಚಿಕೆ ಸಮಿತಿ ಕಾರ್ಯಧ್ಯಕ್ಷರುಗಳಾಗಿ . ನಿಟ್ಟೆ ಚಂದ್ರಶೇಖರ ಶೆಟ್ಟಿ, ಪಾಂಗಾಳ ವಿಶ್ವನಾಥ ಶೆಟ್ಟಿ, ಸಭಾ ವೇದಿಕೆ ನಿರ್ವಹಣೆ ಸಮಿತಿ ಕಾರ್ಯಾಧ್ಯಕ್ಷರುಗಳಾಗಿ ಗಣೇಶ್ ಪೂಂಜಾ ಮತ್ತು ಪ್ರಸನ್ನ ಶೆಟ್ಟಿ. ಭವನ ಮತ್ತು ಚಾವಡಿ ಅಲಂಕಾರ ಸಮಿತಿ ಕಾರ್ಯಾಧ್ಯಕ್ಷರುಗಳಾಗಿ ರವಿ ಶೆಟ್ಟಿ ಮತ್ತು ವಸಂತ ಶೆಟ್ಟಿ. ಕ್ಯಾಟರಿಂಗ್ ಸಮಿತಿ ಕಾರ್ಯಾಧ್ಯಕ್ಷರುಗಳಾಗಿ ದಿನೇಶ್ ಶೆಟ್ಟಿ ಕಳತ್ತೂರು ಮತ್ತು ನಾರಯಣ ಹೆಗ್ಡೆ . ಆಹ್ವಾನ ಪತ್ರಿಕೆ ವಿತರಣಾ ಸಮಿತಿ ಕಾರ್ಯಾಧ್ಯಕ್ಷರುಗಳಾಗಿ ಪ್ರಶಾಂತ್ ಶೆಟ್ಟಿ ಹೆರ್ಡೆಬೀಡು ಮತ್ತು ಪುರುಷೋತ್ತಮ ಶೆಟ್ಟಿ. ಮಹಿಳಾ ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷರುಗಳಾಗಿ ನಯನಾ ಜೆ ಶೆಟ್ಟಿಮತ್ತು ಶಮ್ಮಿ ಎ ಹೆಗ್ಡೆ. ಮ್ಯಾರಥಾನ್ ಸಮನ್ವಯ ಸಮಿತಿ ಕಾರ್ಯಾಧ್ಯಕ್ಷರುಗಳಾಗಿ ಉದಯ ಶೆಟ್ಟಿ ಮತ್ತು ರೊನಕ್ ಜಯ ಶೆಟ್ಟಿ, ನವರಾತ್ರಿ ಉತ್ಸವ ಸಮಿತಿ ಕಾರ್ಯಾಧ್ಯಕ್ಷರುಗಳಾಗಿ ಶ್ರಾವ್ಯ ಎಸ್ ಶೆಟ್ಟಿ,ಅಭಿನಂದನ್ ಶೆಟ್ಟಿ ,ಕಾನೂನು ಸಲಹಾ ಸಮಿತಿ ಕಾರ್ಯಾಧ್ಯಕ್ಷರುಗಳಾಗಿ ನ್ಯಾಯವಾದಿ ಹರಿಪ್ರಸಾದ್ ಶೆಟ್ಟಿ ಮತ್ತು ನ್ಯಾಯವಾದಿ ಶಶಿ ಶೆಟ್ಟಿ. ಮಹಿಳಾ ಸೆಮಿನಾರ್ ಸಮಿತಿ ಕಾರ್ಯಾಧ್ಯಕ್ಷೆಯರುಗಳಾಗಿ ಪ್ರೇಮಾ ಅರ್ ಶೆಟ್ಟಿ, ಯಶೋದಾ ಜೆ .ಶೆಟ್ಟಿ, ಕೃತಿ ಎಲ್ . ಶೆಟ್ಟಿ. PCMC ವಲಯ ಸಮನ್ವಯಕ ಸಮಿತಿ ಕಾರ್ಯಾಧ್ಯಕ್ಷರುಗಳಾಗಿ . ರಾಕೇಶ್ ಶೆಟ್ಟಿಬೆಳ್ಳಾರೆ , ಜಗದೀಶ್ ಶೆಟ್ಟಿ, ಸುಧಾಕರ ಶೆಟ್ಟಿ, ಅವಿನಾಶ್ ಶೆಟ್ಟಿ, ಹಡಪ್ಸರ್ ವಲಯ ಸಮನ್ವಯಕ ಸಮಿತಿ ಕಾರ್ಯಾಧ್ಯಕ್ಷರುಗಳಾಗಿ ನಾರಾಯಣ ಶೆಟ್ಟಿ, ಆನಂದ ಶೆಟ್ಟಿ, ಸತೀಶ್ ರೈ, ರೋಹಿತ್ ಶೆಟ್ಟಿ ನಗ್ರಿ ಗುತ್ತು ರವರಿಗೆ ಕಾರ್ಯ ನಿರ್ವಹಿಸಲು ಜವಾಬ್ದಾರಿ ನೀಡಲಾಯಿತು . ಎಲ್ಲಾ ಸಮಿತಿಗಳ ಕಾರ್ಯಧ್ಯಕ್ಷರುಗಳು ಮತ್ತು ಸಮಾಜ ಭಾಂದವರ ಸಂಪೂರ್ಣ ಸಹಕಾರದೊಂದಿಗೆ ಸುವರ್ಣ ಮಹೋತ್ಸವವನ್ನು ವಿಜ್ರಂಭಣೆಯಿಂದ ನಡೆಸುವಂತೆ ಸಹಕರಿವಂತೆ ಗೌರಾವಧ್ಯಕ್ಷರು, ಅಧ್ಯಕ್ಷರು , ಕಾರ್ಯಾಧ್ಯಕ್ಷರು ಕರೆ ನೀಡಿದರು.
