ಜಗದೋದ್ಧಾರಕನ ಕಲ್ಯಾಣದಲ್ಲಿ .. ತಿರುಪತಿಯಲ್ಲಿ ಮಲಗಿರುವ ಗೋವಿಂದನ್ನೆಬ್ಬಿಸಿ ಸುಪ್ರಭಾತದಲ್ಲಿ ಕರೆತಂದು….. ಅವನಿಷ್ಠಾರ್ಥಗಳ ಅಭಿಷೇಕ ಮಾಡಿ ….
ಹೊನ್ನಾಭರಣಗಳಿಂದ ಶೃಂಗರಿಸಿ …ವರ್ಣರಂಜಿತ ಪುಷ್ಪಾಲಂಕರಿಸಿ … ಅಂಬರದೆತ್ತರಕ್ಕೆ ಮೊಳಗಿದ ವಾದ್ಯಗಳ ದಿಬ್ಬಣದಲ್ಲಿ …. ಮುಗಿಲ ಮುಟ್ಟುವ ಮಂತ್ರೋದ್ಗಾರದಲ್ಲಿ … ಬೆಳ್ಳಿ ಕಲಶದ ಸಾಲಿನೊಳಗೆ … ಹೂಗಳ ಸುರಿಮಳೆಯೊಳಗೆ…. ವರನಾದ ಗೋವಿಂದನ ಹಾಡಿ ಕುಣಿದಾಡಿ … ಶೃಂಗಾರ ಸಜ್ಜಾಗಿ ಲಜ್ಜೆಯ ಒಯ್ಯಾರದಲಿ ಗೋವಿಂದನ ಕಾದು ಕುಳಿತಿರುವ ಶ್ರೀದೇವಿ – ಭೂದೇವಿಯವರ ಭವ್ಯ ಮಂಟಪದೊಳಗೆ …. ಶ್ರೀ ವೆಂಕಟೇಶ್ವರನ ಕರೆತಂದು ಹಸೆಮಣೇರಿಸಿ …ಹನ್ನೆರಡು ಜೋಡಿಗಳ ಸಮಕ್ಷದಲ್ಲಿ … ಐದು ಮುಹೂರ್ತಗಳಲ್ಲಿ ಶಾಸ್ತ್ರೋತ್ತವಾಗಿ …… ಲೋಕ ಕಲ್ಯಾಣಕ್ಕಾಗಿ ಆಕಾಶರಾಜನು ಕನ್ಯಾ ಧಾರೆಯೆರೆದ ಆ ಸುಂದರ ಕ್ಷಣಗಳು … ಸುಮಧುರ ಕಂಠದಲಿ ಗೋವಿಂದನ ಹಾಡುಗಳ ಭಕ್ತಿ ಸಾಗರದಲ್ಲಿ ತೇಲಾಡುವಂತೆ … ಶ್ರೀದೇವಿ – ಭೂದೇವಿಯರಿಗೆ ಶ್ರೀ ವೆಂಕಟೇಶ್ವರ ತಾಳಿ ಕಟ್ಟೋ ವೇಳೆ ಮೊಳಗಿದ ಗಟ್ಟಿಮೇಳದ ನಾದ … ಕತ್ತಲು ತುಂಬಿದ ಜಗದೊಳಗೆ ಬರೀ ಆರತಿ ಬೆಳಕಿನಲ್ಲಿ ಶ್ರೀದೇವಿ – ಭೂದೇವಿಯರ ನಡುವಿನಲ್ಲಿ ರಾರಾಜಿಸುವ ಆ ಗೋವಿಂದನ ಕಂಡಾಗ … ಭಗವಂತನೇ
ಭುವಿಗಿಳಿದು ಬಂದನೇ ? … ಇಲ್ಲ .. ನಾವೆಲ್ಲ ವೈಕುಂಠದಲ್ಲಿರುವೆವೋ ? ಈ ರೋಮಾಂಚನ ದೃಶ್ಯವು ಎಂದಿಗೂ ಮರೆಯದಂತಿದೆ!!!
